ಅಣ್ಣಿಗೇರಿ: ಈ ಬಾರಿ ಪುರಸಭೆ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಜಾತಿಯ ಮಹಿಳೆಗೆ ನೀಡುವಂತೆ ವಿವಿಧ ದಲಿತ ಪರ ಸಂಘಟನೆಗಳು ಮಂಗಳವಾರ ರಾತ್ರಿಯಿಂದ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.
ಪರಿಶಿಷ್ಟ ಜಾತಿಯ ಅಭ್ಯರ್ಥಿಗೆ ಮೀಸಲಾತಿ ನೀಡುವ ಸಲುವಾಗಿ 20ನೇ ವಾರ್ಡಿನ ಸದಸ್ಯೆ ವೀಣಾ ಸಾತಪ್ಪ ಭೋವಿ ಸಲ್ಲಿಸಿರುವ ನ್ಯಾಯಾಲಯ ಅರ್ಜಿ ವಿಚಾರಣೆಯಲ್ಲಿದೆ. ಇದೇ 20ರಂದು ನ್ಯಾಯಾಲಯದ ತೀರ್ಪು ಬರಲಿದೆ ಅಲ್ಲಿಯವರೆಗೆ ನಿಮ್ಮ ಧರಣಿಯನ್ನು ನಿಲ್ಲಿಸಬೇಕು ಎಂದು ಉಪವಿಭಾಗಾಧಿಕಾರಿ ಡಾ.ಮಾಧವ ಗಿತ್ತೆ ಅವರು ಧರಣಿನಿರತರಿಗೆ ತಿಳಿಸಿದರು.
ಇನ್ನು ಚುನಾವಣೆ ಆಯೋಗ ಸ್ಥಳೀಯ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ನಡೆಸುವಂತೆ ಆದೇಶ ನೀಡಿತ್ತು. ಅದರಂತೆ ಚುನಾವಣೆ ನಡೆದಿರುತ್ತದೆ ಎಂದು ತಿಳಿಸಿದರು.
ಈ ವೇಳೆ ದಲಿತಪರ ಮುಖಂಡ ಯೋಗೀಶ್ ಚಲವಾದಿ ಮಾತನಾಡಿ 2018ರ ರೋಸ್ಟರ್ ಪ್ರಕಾರ ಪರಿಶಿಷ್ಟ ಜಾತಿಯ ಮಹಿಳೆಗೆ ಅಧ್ಯಕ್ಷ ಸ್ಥಾನ ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದೇವೆ. ಇದೇ 20ರಂದು ನ್ಯಾಯಾಲಯದ ತೀರ್ಪು ಬರಲಿದೆ ಅಲ್ಲಿಯವರೆಗೆ ನಮ್ಮ ಧರಣಿಯನ್ನು ಕೈ ಬಿಡಲಾಗುವುದು ಎಂದು ಹೇಳಿ ಉಪವಿಭಾಗಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ದಲಿತಪರ ಮುಖಂಡರು ಸೇರಿದಂತೆ ತಾಲೂಕು ಆಡಳಿತ ವರ್ಗದ ಅಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
13/04/2022 10:53 pm