ಲಕ್ಷ್ಮೇಶ್ವರ: ನರೇಗಾ ಯೋಜನೆಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಸರ್ಕಾರದ ಹೊಸ ನಿಯಮದ ಪ್ರಕಾರ ನಿತ್ಯ ಎರಡು ಬಾರಿ ಕಾಮಗಾರಿ ಮಾಡುವ ಸಂದರ್ಭದಲ್ಲಿ ಹಾಜರಾತಿ ನೀಡಬೇಕಾಗಿದೆ. ಈ ಹೊಸ ನಿಯಮವನ್ನು ರದ್ದುಪಡಿಸುವಂತೆ ರಾಮಗೇರಿ ಕೂಲಿ ಕಾರ್ಮಿಕರು ಗ್ರಾಮ ಪಂಚಾಯಿತಿ ಮುಂದೆ ಧರಣಿ ನಡೆಸಿದ್ದಾರೆ.
ಹೌದು. ಈ ಮೊದಲು ನರೇಗಾ ಕಾಮಗಾರಿ ಕೈಗೊಳ್ಳುವ ಬರುವ ಕೂಲಿ ಕಾರ್ಮಿಕರು ಒಂದೇ ಬಾರಿ ಹಾಜರಿ ನೀಡುತ್ತಿದ್ದರು. ಬದಲಾದ ಸರ್ಕಾರದ ನಿಯಮ ಕರ್ತವ್ಯದಲ್ಲಿ ಪಾರದರ್ಶಕತೆ ಉಳಿಸುವ ನಿಟ್ಟಿನಲ್ಲಿ ಬೆಳಿಗ್ಗೆ 6 ಗಂಟೆ 11 ಗಂಟೆ ಹಾಗೂ 2ರಿಂದ 5 ಗಂಟೆ ಹಾಜರಾತಿ ಪಡೆಯಲು ಹೊಸ ನಿಯಮ ಸೂಚಿಸಿದ್ದು, ಈ ಹಾಜರಾತಿಗಾಗಿ ಸರ್ಕಾರ ಎನ್.ಎಂ.ಎಂ.ಎಸ್ ಸಾಫ್ಟವೇರ್ ಬಿಡುಗಡೆ ಮಾಡಿದೆ.
ಈ ಕಾರಣ ಕೂಲಿ ಕಾರ್ಮಿಕರು ಈ ನಿಯಮ ವಿರೋಧಿಸಿ ಮೊದಲಿನಂತೆ ಒಂದೇ ಬಾರಿ ಹಾಜರಿ ಪಡೆಯುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಗದೀಶ್ ಕುರಬರ ಅವರನ್ನು ಒತ್ತಾಯಿಸಿ ಗ್ರಾಮ ಪಂಚಾಯಿತಿ ಎದುರು ಜಮಾಯಿಸಿದ ಪ್ರಸಂಗ ನಡೆದಿದೆ. ಪಿಡಿಓ ಸರ್ಕಾರದ ಆದೇಶಕ್ಕೆ ಬದ್ಧವಾಗಿ ಅಧಿಕಾರಿಗಳು ಕರ್ತವ್ಯ ಮಾಡಬೇಕು ಎಂದು ಹೇಳಿ ಕೂಲಿ ಕಾರ್ಮಿಕರ ತಿಳಿಸಿದ್ದಾರೆ.
Kshetra Samachara
13/04/2022 12:13 pm