ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಆರ್‌ಎಸ್‌ಎಸ್ ಹೆಸರೆತ್ತದಿದ್ರೆ ಸಿದ್ಧರಾಮಯ್ಯ ಮತ್ತು ಡಿಕೆಶಿಗೆ ತಿಂದಿದ್ದು ಕರಗೋದಿಲ್ಲ- ಜಗದೀಶ್ ಶೆಟ್ಟರ್ ಕಿಡಿ

ಹುಬ್ಬಳ್ಳಿ: ಸಿದ್ಧರಾಮಯ್ಯ ಮತ್ತು ಡಿಕೆಶಿಗೆ ಸಂಘಪರಿವಾರದ ಹೆಸರು ತೆಗೆದುಕೊಳ್ಳದೆ ಇದ್ರೆ ತಿಂದಿದ್ದು ಅರಗುವುದಿಲ್ಲ. ರಾಜ್ಯದಲ್ಲಿ ಹಾಗೂ ಎಲ್ಲ ಸಮಸ್ಯೆಗಳಿಗೂ ಸಂಘಪರಿವಾರವನ್ನೇ ಗುರಿಮಾಡುತ್ತಾರೆ. ಪದೇಪದೆ ಆರ್.ಎಸ್.ಎಸ್. ಹೆಸರು ಹೇಳೋದು, ಸಂಘಪರಿವಾರದ ಹೆಸರು ಹೇಳೋದು ಖಯಾಲಿಯಾಗಿಬಿಟ್ಟಿದೆ ಎಂದು ಮಾಜಿ ಸಿಎಂ ಜಗದೀಶ್ ಕಾಂಗ್ರೆಸ್ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು.

ನಗರದಲ್ಲಿಂದು ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಇದನ್ನು ಕೂಡಲೇ ನಿಲ್ಲಿಸಬೇಕು. ಸರ್ಕಾರದ ಬಗ್ಗೆಯಾಗಲಿ ಅಥವಾ ಮುಖ್ಯಮಂತ್ರಿಗಳ ಬಗ್ಗೆಯಾಗಲಿ ಏನಾದ್ರೂ ಮಾತಾಡೋದಿದ್ರೆ ಮಾತನಾಡಲಿ. ಅದನ್ನು ಬಿಟ್ಟು ಸಂಘಪರಿವಾರದ ವಿರುದ್ಧ ಅನಗತ್ಯ ಟೀಕೆ ಮಾಡೋದು ಸರಿಯಲ್ಲ. ವಿರೋಧ ಪಕ್ಷದ ವೈಫಲ್ಯತೆಯನ್ನು ಮುಚ್ಚಿಕೊಳ್ಳಲು ಇವತ್ತು ಸಂಘದ ಹೆಸರನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದರು.

ಧಾರವಾಡದಲ್ಲಿ ಮುಸ್ಲಿಂ ವ್ಯಾಪಾರಿಗಳ ಅಂಗಡಿ ತೆರವು ವೇಳೆ ದಾಂಧಲೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದಕ್ಕೆ ಒಬ್ಬರನ್ನೇ ಹೊಣೆಗಾರರನ್ನಾಗಿ ಮಾಡೋಕೆ ಆಗಲ್ಲ. ಎರಡೂ ಕಡೆಯವರು ಸಂಯಮ ಬಂದದ್ದಿದ್ದರೆ ಈ ರೀತಿಯ ಘಟನೆಗಳು ನಡೆಯೋದಿಲ್ಲ. ಕಲ್ಲಂಗಡಿ ಹಣ್ಣು ಎಸೆದಾಗ ವ್ಯಾಪಾರಿಯ ಪರ ಮಾತಾಡೋರು ಶಿವಮೊಗ್ಗದ ಹರ್ಷನ ಕೊಲೆ ಬಗ್ಗೆ ಯಾಕೆ ಮಾತಾಡಲ್ಲ. ಕೇವಲ ಒಂದು ಸಮಾಜದ, ಒಂದು ಸಮುದಾಯದ ತಪ್ಪನ್ನೇ ಎತ್ತಿ ತೋರಿಸುವುದು ಸರಿಯಲ್ಲ .ಈ ಪದ್ಧತಿ ಹೋದರೆ ಮಾತ್ರ ಸೌಹಾರ್ದತೆ ವಾತಾವರಣ ನಿರ್ಮಾಣ ಆಗೋಕೆ ಸಾಧ್ಯ. ಈ ನಿಟ್ಟಿನಲ್ಲಿ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣವನ್ನು ನಿಲ್ಲಿಸಬೇಕು ಎಂದರು.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

11/04/2022 05:40 pm

Cinque Terre

57.01 K

Cinque Terre

16

ಸಂಬಂಧಿತ ಸುದ್ದಿ