ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ನಾನು ಇನ್ನೂ ಬಿಜೆಪಿ ಸೇರಿಲ್ಲ: ಹೊರಟ್ಟಿ

ಧಾರವಾಡ: ನಾನು ಇನ್ನೂ ಬಿಜೆಪಿಗೆ ಹೋಗಿಲ್ಲ. ಚುನಾವಣೆ ಘೋಷಣೆಯಾದ ಬಳಿಕ ಆ ವಿಚಾರದ ಬಗ್ಗೆ ನೋಡೋಣ. ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಂತೂ ಪಕ್ಕಾ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದಿಂದ ಮೋಹನ ಲಿಂಬಿಕಾಯಿ ಸ್ಪರ್ಧೆ ಮಾಡುತ್ತಿದ್ದಾರೆ ಎನ್ನುವ ಮಾತಿಗೆ ಪ್ರತಿಕ್ರಿಯಿಸಿದ ಹೊರಟ್ಟಿ, ಲಿಂಬಿಕಾಯಿ ಅವರೇ ಅಭ್ಯರ್ಥಿಯಾಗಲಿ. ನನಗೂ ಖುಷಿ. ಬಿಜೆಪಿ ಸೇರುವ ಬಗ್ಗೆ ಅನೇಕರು ಬಂದು ಕೇಳಿದ್ದರು. ಹೀಗಾಗಿ ನಾನು ಬಿಜೆಪಿ ಸೇರುವ ವಿಚಾರ ಹೇಳಿಕೊಂಡಿದ್ದೆ. ಆದರೆ, ಇನ್ನೂ ಪರಿಷತ್ ಚುನಾವಣೆ ಘೋಷಣೆಯಾಗಿಲ್ಲ. ಕೆಲವರು ಬಿಜೆಪಿಗೆ ಬರುವುದಾಗಿ ಕೇಳಿದ್ದಕ್ಕೆ ನಾನು ಬಿಜೆಪಿ ಸೇರ್ಪಡೆ ಬಗ್ಗೆ ಮಾತನಾಡಿದ್ದೆ. ಈಗ ಅವರೇ ಸುಮ್ಮನಿದ್ದಾರೆ ಎಂದರು.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

09/04/2022 03:10 pm

Cinque Terre

37.13 K

Cinque Terre

3

ಸಂಬಂಧಿತ ಸುದ್ದಿ