ಹುಬ್ಬಳ್ಳಿ: ಲವ್ ಜಿಹಾದ್ ಆರೋಪದ ಪ್ರಕರಣದ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿಯವರು ಬರೆದಿದ್ದಾರೆ ಎನ್ನುವ ಪತ್ರವೊಂದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಹೌದು.. ಲವ್ ಜಿಹಾದ್ ಎಂದು ಆರೋಪಿಸಿದ್ದ ಪ್ರಕರಣಕ್ಕೆ ಯುವತಿಯೇ ವಿಡಿಯೋವೊಂದನ್ನು ಹರಿಬಿಟ್ಟು ಪ್ರಕರಣಕ್ಕೆ ಟ್ವಿಸ್ಟ್ ನೀಡಿದ್ದಳು. ಅಲ್ಲದೇ ಪೊಲೀಸರು ಗೋವಾದಿಂದ ಯುವತಿಯನ್ನು ಕರೆತಂದರೂ ಕೂಡ ಪಾಲಕರ ಬಳಿಗೆ ಹೋಗಲು ಯುವತಿ ನಿರಾಕರಿಸಿದ್ದಳು. ಆದರೆ ಈಗ ಎಸ್.ಎಸ್.ಕೆ ಸಮಾಜದವರಾಗಿರುವ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿಯವರ ಲೇಟರ್ ಹೆಡ್ ವೊಂದರಲ್ಲಿ ಎಸ್.ಎಸ್.ಕೆ ಸಮಾಜದ ಹೆಣ್ಣು ಮಕ್ಕಳು ಲವ್ ಜಿಹಾದ್ ಪ್ರಕರಣದಲ್ಲಿ ಸಿಲುಕಿಕೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸುವಂತೆ ಎಸ್.ಎಸ್.ಕೆ ಸಮಾಜದ ಧರ್ಮದರ್ಶಿಗಳಾಗ ನೀಲಕಂಠಸಾ ಜಡಿ ಅವರಿಗೆ ಪತ್ರ ಬರೆದಿದ್ದಾರೆ.
ಎಸ್.ಎಸ್.ಕೆ ಸಮಾಜದ ಹೆಣ್ಣು ಮಕ್ಕಳು ಮುಸ್ಲಿಂ ಯುವಕರನ್ನು ಮದುವೆಯಾದರೇ ಅಂತಹ ಕುಟುಂಬವನ್ನು ಸಮಾಜದಿಂದ ಹೊರಗೆ ಇಡುವುದು, ಯಾವುದೇ ದೇವಸ್ಥಾನಗಳಿಗೆ ಪ್ರವೇಶ ನೀಡುವಂತಿಲ್ಲ. ಅಲ್ಲದೇ ಯಾರೂ ಕೂಡ ಆ ಕುಟುಂಬಕ್ಕೆ ಹೆಣ್ಣನ್ನು ಕೊಡಬಾರದು ಎಂದು ಪತ್ರದಲ್ಲಿ ಬರೆಯಲಾಗಿದೆ. ಆದರೆ ಸಾರ್ವಜನಿಕರ ಸೇವೆಗಾಗಿ ಬರೆಯಬೇಕಿದ್ದ ತಲೆಬರಹ ಇರುವ ಪತ್ರವನ್ನು ಸಮಾಜಕ್ಕಾಗಿ ಬಳಕೆ ಮಾಡಿದ್ದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಸರ್ಕಾರದ ಅಧಿನಲ್ಲಿ ಕಾರ್ಯನಿರ್ವಹಿಸುವವರು ಒಂದು ಕೋಮಿನ ಬಗ್ಗೆ ಪತ್ರ ಬರೆದಿದಲ್ಲದೆ ತಮ್ಮದೇ ಸಮುದಾಯದ ಯುವತಿ ಕುಟುಂಬವನ್ನು ಸಮಾಜದಿಂದ ಹೊರಗಿಡುವದು ಹಾಗೂ ಸಾಮಾಜಿಕ ಬಹಿಷ್ಕಾರ ಹಾಕುವಂತೆ ಸಮಾಜದ ಗಣ್ಯರಿಗೆ ಪತ್ರದ ಮೂಲಕ ಮನವಿ ಮಾಡಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿ ಸ್ಪಷ್ಟನೆ ನೀಡಬೇಕಿದೆ
Kshetra Samachara
08/04/2022 07:32 pm