ನವಲಗುಂದ : ನವಲಗುಂದ ಪುರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಖೈರುನಬಿ ನಾಶಿಪುಡಿ ಅವರು ಇಂದು ಧಾರವಾಡದ ಉಪ ವಿಭಾಗಾಧಿಕಾರಿಗಳ ಮೂಲಕ ಕಾಂಗ್ರೆಸ್ ಮುಖಂಡರ ಮಾರ್ಗದರ್ಶನದಲ್ಲಿ ಹಾಗೂ ಸ್ವಯಂ ಘೋಷಿತವಾಗಿ ರಾಜೀನಾಮೆ ನೀಡಿದರು.
ಇಂದು ಮುಂಜಾನೆ ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆಗೆ ಬಿಜೆಪಿಯ ಪುರಸಭೆ ಸದಸ್ಯರು ಅಡ್ಡಿ ಪಡಿಸಿ, ರಾಜೀನಾಮೆಗೆ ಆಗ್ರಹಿಸಿದ್ದರು. ಇನ್ನು ಕಳೆದ ಸೋಮವಾರ ಮಾರ್ಚ್ 28ರಂದು ಪುರಸಭೆ ಅಧ್ಯಕ್ಷ ಮಂಜುನಾಥ ಜಾಧವ ಅವರು ಸ್ವಯಂ ಘೋಷಿತವಾಗಿ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಒಂದು ವಾರದ ನಂತರ ಈಗ ಉಪಾಧ್ಯಕ್ಷ ಸ್ಥಾನಕ್ಕೆ ಖೈರುನಬಿ ನಾಶಿಪುಡಿ ಅವರು ರಾಜೀನಾಮೆ ನೀಡಿದ್ದಾರೆ.
Kshetra Samachara
04/04/2022 08:48 pm