ಧಾರವಾಡ: ನಾನು ಸಚಿವ ಸ್ಥಾನದ ಲಾಬಿಗಾಗಿ ಅಮಿತ ಶಾ ಅವರನ್ನ ಭೇಟಿ ಮಾಡಿಲ್ಲ, ನಾನು 6 ತಿಂಗಳ ಹಿಂದೆಯೇ ಭೇಟಿ ಮಾಡಲು ಅವರಿಗೆ ಕೇಳಿದ್ದೆ. ಅದಕ್ಕೆ ಶಾ ಅವರು ನನ್ನನ್ನ ಕರೆದಿದ್ದರು ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನದ ಲಾಬಿಗಾಗಿ ಅಮಿತ ಶಾ ಅವರನ್ನ ಭೇಟಿ ಮಾಡಿಲ್ಲ. ಅವರೆ ನನ್ನನ್ನು ಭೇಟಿ ಮಾಡಲು ಹೇಳಿದ್ದರು. ಹೀಗಾಗಿ ಭೇಟಿ ಮಾಡಿ ಬಂದಿದ್ದೇನೆ. ಸಚಿವ ಸ್ಥಾನದ ಲಾಬಿಗಾಗಿ ನಾನು ವಿಶೇಷ ಸಂದರ್ಭ ಭೇಟಿ ಕೇಳಿಲ್ಲ. ಏಕಾಎಕಿ ಒಂದು ದಿನ ಮುಂಚೆ ನನಗೆ ಅವರು ಬಂದು ಭೇಟಿ ಮಾಡಲು ಹೇಳಿದ್ದರು. ಸದ್ಯ ಅಲ್ಲಿ ಪ್ರಸಕ್ತ ರಾಜ್ಯದ ಸ್ಥಿತಿ ಗತಿ ಬಗ್ಗೆ ಚರ್ಚೆ ಮಾಡಿದರು. ಉತ್ತರ ಕರ್ನಾಟಕ ಹಾಗೂ ನನ್ನ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತುಕತೆ ಆಗಿದೆ, ನಾನಂತು ಅವರಿಗೆ ಏನು ಕೇಳೊಕೆ ಹೋಗಿಲ್ಲ. ಡಿಸಿಎಂ ಸ್ಥಾನದ ರೇಸ್‌ನಲ್ಲಿ ನಾನಿಲ್ಲ. ಯಾರಿದ್ದಾರೆ ಎಂಬುದು ಮಾಧ್ಯಮದವರಿಗೆ ಗೊತ್ತು ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದ್ದಾರೆ..
Kshetra Samachara
02/04/2022 04:53 pm