ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಾಲಿಕೆ ಕಾರ್ಪೋರೇಟರ್ ಗಳಿಗೆ ಅಧಿಕಾರ ಇನ್ನೂ ದೂರ,ಚುನಾಯಿತ ಪ್ರತಿನಿಧಿಗಳ ಅಸಮಾಧಾನ

ಹುಬ್ಬಳ್ಳಿ: ಮಹಾನಗರ ಪಾಲಿಕೆಗೆ ಚುನಾವಣೆ ನಡೆದು ಏಳು‌ ತಿಂಗಳು ಕಳೆದರೂ ಚುನಾಯಿತ ಸದಸ್ಯರಿಗೆ ಅಧಿಕಾರ ಇನ್ನಷ್ಟು ದೂರವಾಗುವ ಲಕ್ಷಣಗಳು ಕಂಡು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಸ್ವಪಕ್ಷಿಯ ಸದಸ್ಯರಿಂದಲೇ ಜನಪ್ರತಿನಿಧಿಗಳ ವಿರುದ್ಧ ಅಸಮಧಾನ ಭುಗಿಲೆದ್ದಿದೆ.

ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣೆ ಮೇ ತಿಂಗಳಲ್ಲಿ ಜರುಗುವ ಸಾಧ್ಯತೆ ಇದ್ದು, ಏಪ್ರಿಲ್‌ ತಿಂಗಳಲ್ಲಿ ಅಧಿಸೂಚನೆ ಹೊರಬೀಳುವ ನಿರೀಕ್ಷೆ ಇದೆ. ಅಧಿಸೂಚನೆ ಮುನ್ನವೇ ಪಾಲಿಕೆ ಮೇಯರ್, ಉಪಮೇಮಯರ್ ಚುನಾವಣೆಗೆ ಅಧಿಸೂಚನೆ ಹೊರಡಿಸಿದರೆ ಮಾತ್ರ ಕಾರ್ಪೋರೇಟರ್ ಗಳಿಗೆ ಅಧಿಕಾರ ದೊರೆಯಲಿದೆ. ಇಲ್ಲದಿದ್ದರೆ ಎಂಎಲ್‌ಸಿ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ ಎರಡು ತಿಂಗಳು ಬೇಕಾಗುತ್ತದೆ. ಅಂದರೆ, ಜೂನ್ ತಿಂಗಳು ಬಳಿಕವೇ ಸರಕಾರ ಮನಸ್ಸು ಮಾಡಿದರೆ ಮೇಯರ್ , ಉಪಮೇಯರ್ ಆಯ್ಕೆ ನಡೆಯಬಹುದು. ಇದರಿಂದ ಜನರು ಮಾತ್ರ ನಿರಾಶೆ ಭಾವನೆಯಲ್ಲಿಯೇ ಜೀವನ ನಡೆಸುವಂತಾಗಿದೆ.

ಇನ್ನೂ ಮಹಾನಗರ ಪಾಲಿಕೆಗೆ ಚುನಾವಣೆ ನಡೆದು ಬರೋಬ್ಬರಿ ಏಳು ತಿಂಗಳು ಕಳಿದಿವೆ. ವಾರ್ಡ್ ಪುನರ್ವಿಂಗಡಣೆ ಬಳಿಕ 82 ವಾರ್ಡ್ ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ‌ 41 ಸ್ಥಾನಗಳನ್ನು ಗೆದ್ದು ಸರಳ ಬಹುಮತ ಪಡೆದಿದೆ. ಇನ್ನೇನು ಮೇಯರ್ ಉಪಮೇಯರ್ ಆಯ್ಕೆಗೆ ಅಧಿಸೂಚನೆ ಹೊರಬೀಳಲಿದೆ‌ ಎಂದು ಅಧಿಕಾರದ ಕನಸುಕಂಡಿದ್ದ ಕಾರ್ಪೋರೆಟರ್ ಗಳ ನಿರೀಕ್ಷೆ ಇನ್ನೂವರೆಗೂ ಹಾಗೆ ಮುಂದುವರಿದಿದೆ.

ಮೊದಲು 21 ಅವಧಿಯದ್ದೋ ಅಥವಾ 23 ನೇ ಅವಧಿಯದ್ದೋ ಎಂಬ ಜಿಜ್ಞಾಸೆ ಯಲ್ಲಿಯೇ ಪಾಲಿಕೆ ನಾಲ್ಕು ತಿಂಗಳು ಕಳೆಯಿತು. ಈ ಬಗ್ಗೆ ಅಧಿಕೃತವಾಗಿ ಕಳಿಸುವಂತೆ ಪಾಲಿಕೆ ಕೇಳಿಕೊಂಡ ನಾಲ್ಕು ತಿಂಗಳ ನಂತರ ನಗರಾಭಿವೃದ್ಧಿ ಇಲಾಖೆಯು 21 ನೇ ಅವಧಿಯಂತೆಯೇ ಮೇಯರ್, ಉಪಮೇಯರ್ ಆಯ್ಕೆ ಮಾಡುವಂತೆ ಸೂಚಿಸಿ ಅಧಿಕೃತ ಪತ್ರ ವನ್ನು ಕಳುಹಿಸಿದೆ. ಆದರೆ ಅಧಿಕಾರ ಸಿಗದೇ ಸ್ವಪಕ್ಷಿಯರಿಂದಲೇ ಅಸಮಾಧಾನ ಹೊರಬರುತ್ತಿದೆ.

ಎಲ್ಲಾ ವಿಧದಲ್ಲಿ ಕ್ಲಿಯರ್ ಇದ್ದರೂ ಮೇಯರ್, ಉಪಮೇಯರ್ ಆಯ್ಕೆಗೆ ಮೀನಮೇಷ ಏಕೆ..? ಎಂಬ ಪ್ರಶ್ನೆ ಕಾರ್ಪೋರೇಟರ್ ಗಳನ್ನು ಕಾಡುತ್ತಿದೆ. ತಮ್ಮದೇ ಪಕ್ಷದ ಸರಕಾರ ಅಧಿಕಾರದಲ್ಲಿದ್ದರೂ ವಿಳಂಬ ಮಾಡುತ್ತಿರುವುದೇಕೆ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

Edited By : Shivu K
Kshetra Samachara

Kshetra Samachara

01/04/2022 05:49 pm

Cinque Terre

26.24 K

Cinque Terre

3

ಸಂಬಂಧಿತ ಸುದ್ದಿ