ಧಾರವಾಡ: 2 ವರ್ಷದಿಂದ ವೇತನ ಪರಿಷ್ಕರಣೆ ಮಾಡದೇ ಬಾಕಿ ಉಳಿಸಿರುವ ಕಂಪನಿ ವಿರುದ್ಧ ಸಿಡಿದೆದ್ದ ಟಾಟಾ ಮಾರ್ಕೊ ಪೋಲೊ ಕಾರ್ಮಿಕರು ಇಂದು ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ಸಾವಿರಾರು ಕಾರ್ಮಿಕರು ಧಾರವಾಡದ ಕಲಾಭವನದಿಂದ ನೇರವಾಗಿ ಡಿ.ಸಿ. ಕಚೇರಿ ವರೆಗೂ ಆಗಮಿಸಿ ಪ್ರತಿಭಟನೆ ನಡೆಸಿ, ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶ ಮಾಡಿ ಸಮಸ್ಯೆಯನ್ನು ಬಗೆಹರಿಸಬೇಕಾಗಿ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಕಾರ್ಮಿಕರು ಮತ್ತು ಕಾರ್ಮಿಕ ಕುಟುಂಬದವರು ಪಾಲ್ಗೊಂಡು ಹೊಸ ವೇತನ ಒಪ್ಪಂದ ಜಾರಿ ಮಾಡಲು ಸಿಎಂ ಅವರೂ ಕೂಡ ಕಂಪನಿ ಜತೆಗೆ ಮಾತನಾಡಿ ಸಮಸ್ಯೆ ಇತ್ಯರ್ಥಪಡಿಸಬೇಕೆಂದು ಆಗ್ರಹಿಸಿದರು.
Kshetra Samachara
27/03/2022 08:16 pm