ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹೈಕೋರ್ಟ್ ತೀರ್ಪು ವಿರೋಧಿಸಿ ಕರೆ ನೀಡಿದ ಬಂದ್ ಗೆ ನೀರಸ ಪ್ರತಿಕ್ರಿಯೆ !

ಹುಬ್ಬಳ್ಳಿ: ಹಿಜಾಬ್ ಕುರಿತು ಹೈಕೋರ್ಟ್ ತೀರ್ಪು ವಿರೋಧಿಸಿ ಮುಸ್ಲಿಂ ಸಮುದಾಯದ ವಿವಿಧ ಸಂಘಟನೆಗಳು ಕರೆ ನೀಡಿರುವ ಬಂದ್ ಗೆ ಹುಬ್ಬಳ್ಳಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮುಸ್ಲಿಂ ಸಮುದಾಯದವರು ಸ್ವಯಂ ಪ್ರೇರಣೆಯಿಂದ ಬಂದ್ ಆಚರಣೆ ಮಾಡಿದರು. ಮುಸ್ಲಿಂ ಸಮುದಾಯಕ್ಕೆ ಸೇರಿದ ಅಂಗಡಿ ಮುಂಗ್ಗಟ್ಟುಗಳು ಸಂಪೂರ್ಣ ಬಂದ್ ಮಾಡಿದ್ದರು. ಪ್ರತಿಭಟನೆಗೆ ಅವಕಾಶ ನೀಡದಿರುವ ಹಿನ್ನೆಲೆಯಲ್ಲಿ, ಅವರವರ ಮನೆಗಳಲ್ಲಿ ಕುಳಿತು ಬಂದ್ ಆಚರಣೆ ಮಾಡಿದರು.

ಹಳೆ ಹುಬ್ಬಳ್ಳಿ, ಶಹಬಜಾರ, ದುರ್ಗದ ಬೈಲ್ ಸೇರಿದಂತೆ ಮತ್ತಿತರ ಕಡೆ ಬಹುತೇಕ ಅಂಗಡಿ ಮುಂಗ್ಗಟ್ಟುಗಳನ್ನು

ಸ್ವಯಂ ಪ್ರೇರಣೆಯಿಂದಲೇ ಬಂದ್ ಆಗಿದ್ದವು. ಹಿಜಾಬ್ ಕುರಿತ ತೀರ್ಪಿಗೆ ವಿರೋಧ ವ್ಯಕ್ತಪಡಿಸಿ, ಹಿಜಾಬ್ ತೀರ್ಪನ್ನು ಮರುಪರಿಶೀಲಿಸುವಂತೆ ಈ ಮೂಲಕ‌ ಆಗ್ರಹಿಸಲಾಯಿತು. ಬಂದ್ ಕರೆ ಹಿನ್ನೆಲೆಯಲ್ಲಿ ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

Edited By : Nagesh Gaonkar
Kshetra Samachara

Kshetra Samachara

17/03/2022 06:38 pm

Cinque Terre

37.42 K

Cinque Terre

5

ಸಂಬಂಧಿತ ಸುದ್ದಿ