ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಪಂಪನ ಜನ್ಮಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ

ಅಣ್ಣಿಗೇರಿ: ಪಂಪನ ನಾಡು ಅಣ್ಣಿಗೇರಿಯ ಪಟ್ಟಣಕ್ಕೆ ರಾಜ್ಯ ಬಿಜೆಪಿಯ ಉಪಾಧ್ಯಕ್ಷರಾದ ವಿಜಯೇಂದ್ರ ಭೇಟಿ ನೀಡಿ ಆರಾಧ್ಯದೈವ ದಕ್ಷಿಣ ಕಾಶಿ ಎಂದು ಕರೆಯಲ್ಪಡುವ ಶ್ರೀ ಅಮೃತೇಶ್ವರ ದೇವರ ದರ್ಶನ ಪಡೆದರು.

ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾದ ದೇವಾಲಯದ ಗೋಡೆಗಳು ಪೌರಾಣಿಕ ಚಿತ್ರಗಳ ಕೆತ್ತನೆಗಳನ್ನು ವೀಕ್ಷಣೆ ಮಾಡಿ ದೇವಸ್ಥಾನದ ಇತಿಹಾಸದ ಬಗ್ಗೆ ರಾಜ್ಯ ರೈತ ಬಿಜೆಪಿ ಮೋರ್ಚಾ ಉಪಾಧ್ಯಕ್ಷರಾದ ಷಣ್ಮುಖ ಗುರಿಕಾರ್ ಅವರ ಹತ್ತಿರ ಮಾಹಿತಿ ಪಡೆದುಕೊಂಡರು.

ನಂತರ ಕಾಲ್ನಡಿಗೆಯ ಮುಖಾಂತರ ದಾಸೋಹ ಮಠಕ್ಕೆ ಭೇಟಿ ನೀಡಿ ಗದ್ದುಗೆಯ ದರ್ಶನ ಪಡೆದು ಶಿವಕುಮಾರ ಶ್ರೀಗಳ ಆಶೀರ್ವಾದ ಪಡೆದು ಶ್ರೀಗಳೊಂದಿಗೆ ಕುಶಲೋಪರಿಯನ್ನು ವಿಚಾರಿಸಿದರು.

ನಂತರ ಅಲ್ಲಿಂದ ಇತ್ತೀಚೆಗಷ್ಟೇ ಪದ್ಮಶ್ರೀ ಪ್ರಶಸ್ತಿಗೆ ಪುರಸ್ಕೃತರಾದ ಅಬ್ದುಲ್ ಖಾದರ್ ನಡಕಟ್ಟಿನ ಅವರ ನಿವಾಸಕ್ಕೆ ತೆರಳಿ ಕೃಷಿ ಯಂತ್ರೋಪಕರಣಗಳನ್ನು ವೀಕ್ಷಣೆ ಮಾಡಿ ಯಂತ್ರೋಪಕರಣಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ಅಬ್ದುಲ್ ಖಾದರ್ ನಡಕಟ್ಟಿನ ಅವರಿಗೆ ಗೌರವಪೂರ್ವಕವಾಗಿ ಸನ್ಮಾನಿಸಿದರು.

Edited By :
Kshetra Samachara

Kshetra Samachara

14/03/2022 01:24 pm

Cinque Terre

28.2 K

Cinque Terre

0

ಸಂಬಂಧಿತ ಸುದ್ದಿ