ಹುಬ್ಬಳ್ಳಿ: ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಅದ್ದೂರಿ ಗೆಲುವು ಸಾಧಿಸಿದೆ. ಜಗತ್ತಿನ ಅತಿದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ದೇಶದ ಜನರು ಪ್ರಧಾನಿ ಮೋದಿ ಮೇಲೆ ಇಟ್ಟ ವಿಶ್ವಾಸ ಕಂಡು ನಾನು ಬೆರಗಾಗಿದ್ದೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಪಂಚರಾಜ್ಯ ಚುನಾವಣೆ ಬಳಿಕ ಹುಬ್ಬಳ್ಳಿಗೆ ಆಗಮಿಸಿದ ಮಾಧ್ಯಮದ ಜೊತೆಗೆ ಮಾತನಾಡಿ, ನಾನು ಉತ್ತರಾಖಂಡ ಬಗ್ಗೆ ಹೇಳೋದು ಇಷ್ಟೇ. ನಾಲ್ಕು ದಿನ ಪ್ರಧಾನಮಂತ್ರಿಗಳು ಉತ್ತರಾಖಂಡದ ಭೇಟಿ ಗೆಲುವಿಗೆ ಕಾರಣವಾಯಿತು. ಉತ್ತರಾಖಂಡ ಗೆಲುವಿಗೆ ನಾನೊಬ್ಬನೇ ಕಾರಣ ಅಂತ ಹೇಳುವುದಿಲ್ಲ. 80 ಸಾವಿರ ಸಭೆಗಳನ್ನು ಮಾಡಿದ್ದು ಮೈಲುಗಲ್ಲು. ಉತ್ತರಾಖಂಡ ರಾಜ್ಯ ಅಭಿವೃದ್ಧಿ ಕಂಡಿದ್ದು ಈ ಐದು ವರ್ಷದಲ್ಲಿ ಎಂದರು.
ನಾಲ್ಕು ರಾಜ್ಯದ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಮುಗಿಸಬೇಕಿದೆ. ಏಪ್ರಿಲ್ 8 ರವರೆಗೆ ಅಧಿವೇಶನ ಇದೆ. ಅಧಿವೇಶನ ಮುಗಿದ ಬಳಿಕ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಚರ್ಚೆ. ಅಲ್ಲಿಯವರೆಗೆ ಯಾವುದೇ ಸಂಪುಟ ವಿಸ್ತರಣೆ, ಪುನಾರಚನೆ ಬಗ್ಗೆ ಯಾವುದೇ ಚರ್ಚೆ ಇಲ್ಲ ಎಂದು ಅವರು ಹೇಳಿದರು.
ಉಕ್ರೇನ್ ಹಾಗೂ ರಷ್ಯಾ ಜೊತೆ ಮಾತುಕತೆ ನಡೆಸಿ 22 ಸಾವಿರ ಜನರನ್ನು ಸ್ಥಳಾಂತರ ಮಾಡಿದ್ದಾರೆ. ಇದು ಮೋದಿ ವ್ಯಕ್ತಿತ್ವದ ಗಟ್ಟಿತನ ತೋರಿಸುತ್ತದೆ ಎಂದರು.
ಡಿಕೆಶಿ ಗೋವಾಕ್ಕೆ ಹೋಗಿದ್ದಕ್ಕೆ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದು, ಅವರ ಯಾಕೆ ಹೋಗಿದ್ದರು, ಅನ್ನೊದು ಇನ್ನು ಅರ್ಥವಾಗಿಲ್ಲ. ತೋಳಬಲ ತೋರಿಸಲು, ಗೂಂಡಾಗಿರಿ ಮಾಡಲು ಡಿಕೆಶಿ ಗೋವಾಗೆ ಹೋಗಿದ್ರಾ..? ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿಸಿದ್ರು ಎಂಬಂತೆ ಕಾಂಗ್ರೆಸ್ ನಡೆ ಎಂದು ಲೇವಡಿ ಮಾಡಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
13/03/2022 03:56 pm