ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಪ‌.ಪಂ. ಸಾಮಾನ್ಯ ಸಭೆ; ಪ್ರಶ್ನೆಗೆ ತಡವರಿಸಿದ ಮುಖ್ಯಾಧಿಕಾರಿ

ಕುಂದಗೋಳ: ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಆರಂಭದಲ್ಲೇ ಸದಸ್ಯ ಮಲ್ಲಿಕಾರ್ಜುನ ಕಿರೇಸೂರ್ ಮೊದಲು ಚರ್ಚೆ ಆರಂಭಿಸಿ, ಬಳಿಕ ಸದಸ್ಯರ ಹಾಜರಾತಿ ಸಹಿ ಪಡೆಯುವುದು ಎಷ್ಟು ಸರಿ, ಈ ನಿಯಮ ಇದೆಯಾ ? ಎಂದು ಪ.ಪಂ. ಮುಖ್ಯಾಧಿಕಾರಿ ಗಂಗಾಧರ ಸಂಕ್ಯಾನವರ ಬಳಿ ಕೇಳಿದಾಗ ಅಧಿಕಾರಿಗಳು ಉತ್ತರ ನೀಡಲು ತಡವರಿಸಿದ ಪ್ರಸಂಗ ನಡೆಯಿತು.

ಅಧಿಕಾರಿಗಳು ಹಿಂದಿನ ಸಾಮಾನ್ಯ ಸಭೆ ನಡಾವಳಿ ಓದಿದ ಬಳಿಕ, ಸ್ಥಾಯಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಿದ ಬೈಲಾ (ನಿಯಮ) ಕೇಳಿದಾಗಲೂ ಪ.ಪಂ. ಮುಖ್ಯಾಧಿಕಾರಿಗಳ ಉತ್ತರ ಗೊಂದಲಮಯವಾಗಿತ್ತು. ಬಳಿಕ ಸಾಮಾನ್ಯ ಸಭೆ ಚಾಲ್ತಿಯಲ್ಲಿರುವಾಗಲೇ ಅಧಿಕಾರಿ ಹಾಗೂ ಸದಸ್ಯರು ಸಭೆ ವಿಸರ್ಜನೆ ಮಾಡದೇ ಪಂಚಾಯತ್ ರಾಜ್ ನಿಯಮ ಪುಸ್ತಕ ಕೈಗೆತ್ತಿದರೂ ಸದಸ್ಯರಿಗೆ ಉತ್ತರ ಕೊಡಲು ಅರ್ಧ ಗಂಟೆ ವಿಳಂಬಿಸಿದರು.

ಬಳಿಕ ಸದಸ್ಯ ಮಲ್ಲಿಕಾರ್ಜುನ, ಉತ್ತರ ನಾಳೆ ಕೊಡಿ. ಈಗ ಸಭೆ ಆರಂಭಿಸಿ ಎಂದಾಗ ಅಧಿಕಾರಿಗಳು, ಸದಸ್ಯರು- ಸ್ಥಾಯಿ ಸಮಿತಿ ಸದಸ್ಯರ ನೇತೃತ್ವದಲ್ಲಿ ಸ್ಥಾಯಿ ಸಮಿತಿ ಚೇರಮನ್ ಆಯ್ಕೆ ನಡೆಯಿತು. ತದನಂತರ ಸಭೆಯಲ್ಲಿ ಹಿಂದಿನ ನಡಾವಳಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯ ಹಾಗೂ ಪ್ರಸಕ್ತ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸರ್ವ ಸದಸ್ಯರು ಚರ್ಚೆ ಕೈಗೊಂಡರು.

ಬೆಳಿಗ್ಗೆ 11ಕ್ಕೆ ನಿಗದಿ ಪಡಿಸಿದ್ದ ಸಾಮಾನ್ಯ ಸಭೆ 11.30ಕ್ಕೆ ಆರಂಭವಾಗಿದ್ದಲ್ಲದೆ, ನಡುವೆ ವೃಥಾ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ನಿಯಮ ತಿಳಿಸಿದ ಕಾರಣ ಅರ್ಧ ಗಂಟೆ ವಿಳಂಬವಾಗಿದ್ದು, ಬಳಿಕ ನಡೆದ ಅಭಿವೃದ್ಧಿ ಚರ್ಚೆಯಲ್ಲಿ ಅಪರಾಹ್ನ 3.30ಕ್ಕೆ ಸಭೆ ಮುಕ್ತಾಯವಾಯಿತು.

Edited By :
Kshetra Samachara

Kshetra Samachara

11/03/2022 01:32 pm

Cinque Terre

34.61 K

Cinque Terre

0

ಸಂಬಂಧಿತ ಸುದ್ದಿ