ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಅಣ್ಣಿಗೇರಿ ಪುರಸಭೆಗೆ ನೇಮಕವಾಗದ ಅಧ್ಯಕ್ಷ, ಉಪಾಧ್ಯಕ್ಷ

ಧಾರವಾಡ: ಅಣ್ಣಿಗೇರಿ ಪುರಸಭೆಗೆ ಚುನಾವಣೆ ನಡೆದು ಅನೇಕ ತಿಂಗಳು ಕಳೆದರೂ ಪುರಸಭೆಗೆ ಇನ್ನೂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸದೇ ಇರುವುದರಿಂದ ಕಾಂಗ್ರೆಸ್ ಸದಸ್ಯರು ಇದೀಗ ಜಿಲ್ಲಾಧಿಕಾರಿ ಕಚೇರಿ ಮೆಟ್ಟಿಲೇರಿದ್ದಾರೆ.

ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಹಾಗೂ ಕಾಂಗ್ರೆಸ್ ಮುಖಂಡ ವಿನೋದ್ ಅಸೂಟಿ ನೇತೃತ್ವದಲ್ಲಿ ಪುರಸಭೆಗೆ ಆಯ್ಕೆಯಾದ ಕಾಂಗ್ರೆಸ್ ಕಾರ್ಯಕರ್ತರು ಶೀಘ್ರವೇ ಅಣ್ಣಿಗೇರಿ ಪುರಸಭೆಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಅಲ್ಲದೇ ಸಚಿವರೇ ಉದ್ದೇಶಪೂರ್ವಕವಾಗಿ ಈ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಯನ್ನು ತಡೆಹಿಡಿದಿರಬಹುದು ಎಂದು ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಆರೋಪಿಸಿದರು.

ಅಣ್ಣಿಗೇರಿ ಹಾಗೂ ಗದಗ ಪುರಸಭೆ ಚುನಾವಣೆ ಏಕಕಾಲಕ್ಕೆ ನಡೆದಿದ್ದು, ಗದಗದಲ್ಲಿ ಈಗಾಗಲೇ ಅಧ್ಯಕ್ಷ, ಉಪಧ್ಯಾಕ್ಷರ ನೇಮಕವಾಗಿದೆ. ಆದರೆ, ಇಲ್ಲಿ ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆಗೆ ಮೇಯರ್, ಉಪಮೇಯರ್ ನೇಮಕವಾಗಿಲ್ಲ. ಅಣ್ಣಿಗೇರಿ ಪುರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗಿಲ್ಲ. ನಮಗೆ ಮತ ಹಾಕಿದ ಮತದಾರರು ನಮಗೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Edited By : Manjunath H D
Kshetra Samachara

Kshetra Samachara

09/03/2022 04:47 pm

Cinque Terre

18.09 K

Cinque Terre

0

ಸಂಬಂಧಿತ ಸುದ್ದಿ