ಧಾರವಾಡ: ಬಿಜೆಪಿಯವರು ಕೇವಲ ದುಡ್ಡು ಮಾಡುತ್ತಿದ್ದಾರೆ ಎಂದು ಹೇಳಿದ್ದ ಶಾಸಕ ಪ್ರಿಯಾಂಕ ಖರ್ಗೆಗೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ತಿರುಗೇಟು ನೀಡಿದ್ದಾರೆ.
ಧಾರವಾಡದಲ್ಲಿ ಮಾಧ್ಯಮಗಳೊಂಡಿಗೆ ಮಾತನಾಡಿದ ಅವರು, ಈ ಹಿಂದೆ ಅಧಿಕಾರ ನಡೆಸಿದ ಕಾಂಗ್ರೆಸ್ಸಿಗರ ಆಡಳಿತ ನೋಡಿಯೇ ಜನ ಈಗ ನರೇಂದ್ರ ಮೋದಿ ಅವರಿಗೆ ಅಧಿಕಾರ ನೀಡಿದ್ದಾರೆ. ಮುಂದೆಯೂ ನರೇಂದ್ರ ಮೋದಿ ಅವರೇ ಅಧಿಕಾರಕ್ಕೆ ಬರುತ್ತಾರೆ. ಪ್ರಿಯಾಂಕ್ ಖರ್ಗೆ ಅವರ ಸರ್ಟಿಫಿಕೇಟ್ ನಮಗೆ ಬೇಕಾಗಿಲ್ಲ ಎಂದರು.
ಸಿಎಂ ಬೊಮ್ಮಾಯಿ ಅವರ ಬಜೆಟ್ ಎಲ್ಲರಿಗೂ ತೃಪ್ತಿ ತಂದಿದೆ. ನೀರಾವರಿ ಹಾಗೂ ರೈತರಿಗೆ ಅನುಕೂಲವಾಗುವಂತೆ ಬಜೆಟ್ ಮಂಡನೆ ಮಾಡಲಾಗಿದೆ. ಪ್ರತಿಯೊಂದು ನೀರಾವರಿ ಯೋಜನೆಗೂ ಸುಮ್ಮನೆ ದುಡ್ಡು ಇಡುವುದಿಲ್ಲ. ಎಲ್ಲದಕ್ಕೂ ಅನುಕೂಲ ಆಗಲಿ ಎಂದು ದುಡ್ಡು ಇಡಲಾಗುತ್ತದೆ. ಮಹಾದಾಯಿ ಯೋಜನೆಗೆ ಜಾರಿಗೆ ಸಿಎಂ ಮುತುವರ್ಜಿ ವಹಿಸುತ್ತಾರೆ. ಅವರು ಇದೇ ಜಿಲ್ಲೆಯವರು. ಖಂಡಿತ ಈ ಬಗ್ಗೆ ಸಿಎಂ ತ್ವರಿತಗತಿಯಲ್ಲಿ ಕೆಲಸ ಮಾಡುತ್ತಾರೆ ಎಂದರು.
Kshetra Samachara
05/03/2022 03:47 pm