ಧಾರವಾಡ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಮಂಡಿಸಿದ ಬಜೆಟ್ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಬಜೆಟ್ ಆಗಿದೆ. ಬಜೆಟ್‌ನಲ್ಲಿ ಕೃಷಿ ಯಂತ್ರೋಪಕರಣ ಬಳಕೆ ಪ್ರೋತ್ಸಾಹಿಸಲು ರೈತ ಶಕ್ತಿ ಯೋಜನೆಯಡಿ ಡಿಸೇಲ್‌ಗೆ 250 ರೂಪಾಯಿ ಸಹಾಯಧನ ಘೋಷಿಸಿರುವುದು ಖುಷಿಯ ಸಂಗತಿ. ಶ್ರಮ ಜೀವಿಗಳಾದ ಆಶಾ-ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಳ ಮಾಡಲಾಗಿದೆ.
ಬೆಳಗಾವಿ-ಕಿತ್ತೂರು-ಧಾರವಾಡಕ್ಕೆ ನೂತನ ರೈಲು ಮಾರ್ಗಕ್ಕೆ ಅನುದಾನ ನೀಡಿರುವುದು. ಕಳಸಾ ಬಂಡೂರಿ ಯೋಜನೆ ಅಭಿವೃದ್ದಿಗೆ ಒಂದು ಸಾವಿರ ಕೋಟಿ ಹಣ ಘೋಷಿಸಿರುವುದು ಶ್ಲಾಘನೀಯ. ಯಾವುದೇ ತೆರಿಗೆ ಹೊರೆಯನ್ನು ಮಾಡದೇ ಜನಪ್ರಿಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಅದ್ಭುತವಾದ ಬಜೆಟ್ ಮಂಡನೆ ಮಾಡಿದ್ದಾರೆ ಎಂದು ಶಾಸಕ ಅಮೃತ ದೇಸಾಯಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Kshetra Samachara
04/03/2022 09:36 pm