ಅಣ್ಣಿಗೇರಿ; ಪಟ್ಟಣದ ಎಪಿಎಂಸಿ ಆವರಣದಲ್ಲಿ ಇರುವ ತಾಲೂಕು ಫಾರ್ಮರ್ ಪ್ರೊಡ್ಯೂಸರ್ ಕಂಪನಿಗೆ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ಭೇಟಿ ನೀಡಿ ರೈತರಿಗೆ ಕಂಪನಿಯಿಂದ ಒಳ್ಳೆಯದಾಗುತ್ತದೆ, ಹಾಗೂ
ರೈತರ ಬೆಳೆಗಳು ಚೆನ್ನಾಗಿ ಬಂದು ಸರಿಯಾದ ಬೆಲೆ ಸಿಗದೆ ಇದ್ದಾಗ ಕಂಪನಿಯಿಂದ ಕೆಲಸ ಮಾಡಿ ರೈತರಿಗೆ ನ್ಯಾಯ ಒದಗಿಸಬೇಕು ಅಂದಾಗ ಮಾತ್ರ ಕಂಪನಿಗೆ ಒಳ್ಳೆಯ ಹೆಸರು ಬರುತ್ತದೆ ಎಂದು ಅಭಿಪ್ರಾಯಪಟ್ಟರು.
ಕಂಪನಿಯ ಅಧ್ಯಕ್ಷರಾದ ಪ್ರಕಾಶ ಅಂಗಡಿ ಮಾತನಾಡಿ ಬಸವರಾಜ ಹೊರಟ್ಟಿ ಅವರಂತಹ ನಾಯಕರ ಸಹಕಾರ ಇದ್ದರೆ ಹಾಗೂ ಜನರ ಪ್ರೀತಿ ವಿಶ್ವಾಸ ವಿದ್ದರೆ ನಮ್ಮ ಕಂಪನಿ ಉತ್ತುಂಗಕ್ಕೆ ಕೊಂಡೊಯ್ಯಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
Kshetra Samachara
04/03/2022 03:49 pm