ಕುಂದಗೋಳ : ನನ್ನನ್ನು ನೀವು ಆಯ್ಕೆ ಮಾಡಿ ಡೆಲ್ಲಿಗೆ ಕಳುಹಿಸಿದ್ದೀರಿ ನಿಮ್ಮ ಗೌರವಕ್ಕೆ ದಕ್ಕೆ ಬಾರದ ಹಾಗೆ ಕೆಲಸ ಮಾಡುತ್ತೇನೆ, ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನುಡಿದಿದ್ದಾರೆ.
ಇವರು ಕುಂದಗೋಳದಲ್ಲಿ ಕೋಲ್ ಇಂಡಿಯಾ ಲಿಮಿಟೆಡ್ ಇವರ ಸಹಯೋಗದಲ್ಲಿ 77 ಲಕ್ಷ ವೆಚ್ಚದಲ್ಲಿ ನೂತನ ಪಶು ಆಸ್ಪತ್ರೆ ಉದ್ಘಾಟನೆ ಮಾಡಿ ಮಾತನಾಡಿ, ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಪಟ್ಟಣ ವ್ಯಾಪ್ತಿಯಲ್ಲಿ 1 ಕೋಟಿ ವೆಚ್ಚದಲ್ಲಿ ಲೈಟಿಂಗ್ ಅಳವಡಿಕೆ ಕಾರ್ಯ ಆರಂಭವಾಗಲಿದೆ, ಕುಂದಗೋಳಕ್ಕೆ 230 ಮನೆ ಒದಗಿವೆ, ಅವುಗಳನ್ನು ವಸತಿ ಸಚಿವ ವಿ.ಸೋಮಣ್ಣ ಅವರನ್ನು ಕರೆತಂದು ಆರಂಭಿಸುತ್ತೇನೆ, ಅದರಂತೆ ಕುಂದಗೋಳ ಪಟ್ಟಣ ತಾಲೂಕಿಗೆ ಎಲ್ಲೆಲ್ಲಿ ಎಷ್ಟೆಷ್ಟು ಕಾಮಗಾರಿ ಅಭಿವೃದ್ಧಿ ಆಗ್ತಾ ಇವೆ ಎಂಬುದನ್ನು ವಿವರಿಸಿದರು.
ಇದೇ ಸಂದರ್ಭ ಯೂಕ್ರೇನ್ ನಲ್ಲಿ ಸಿಲುಕಿದ ಚೈತ್ರಾ ಸಂಶಿ ತಂದೆ ಗಂಗಾಧರ ವೇದಿಕೆ ಏರಿ ಕೇಂದ್ರ ಸಚಿವರಲ್ಲಿ ಮಗಳ ಬಗ್ಗೆ ಕೇಳಿದಾಗ, ನಿಮ್ಮ ಮಗಳು ಪೊಲೇಂಡ್ ತುಲಪಿದ್ದಾಳೆ, ಅವಳು ಮನೆಗೆ ಸುರಕ್ಷಿತವಾಗಿ ಬರ್ತಾಳೆ ಇದು ಮೋದಿ ಸರ್ಕಾರದ ಪರ ಮಾತು ಎಂದರು.
ಸಚಿವರು ದೆಹಲಿ ಹೋಗುವ ಧಾವಂತದಲ್ಲಿರುವಾಗಲೇ ಜನತೆ ಮನವಿ ಸಲ್ಲಿಸಲು ಮುಗಿಬಿದ್ದರು, ಈ ಸಂದರ್ಭದಲ್ಲಿ ಬಿಜೆಪಿ ಸರ್ವ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
04/03/2022 12:30 pm