ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮೆಡಿಕಲ್ ಮಾಫಿಯಾಗೆ ಕಾಂಗ್ರೆಸ್ ಅಡಿಪಾಯ ಹಾಕಿದೆ: ಸಚಿವ ಉಮೇಶ ಕತ್ತಿ

ಹುಬ್ಬಳ್ಳಿ: ಉಕ್ರೇನ್ ನಲ್ಲಿರುವ ಕನ್ನಡಿಗರಿಗೆ ರಕ್ಷಣೆ ಸಿಗಬೇಕು ಎಂಬುವ ವಾದ ದೇಶಾದ್ಯಂತ ಹರಡುತ್ತಿದೆ. ಈಗಾಗಲೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹದಿನಾರು ಸಾವಿರ ಜನರನ್ನು ಕರೆ ತಂದಿದ್ದಾರೆ. ಭಾರತೀಯರನ್ನು ಸುರಕ್ಷಿತವಾಗಿ ಕರೆ ತರುವ ಕಾರ್ಯ ನಡೆದಿದೆ. ಆದರೆ ಯುದ್ಧ ನಡೆದಿರುವುದರಿಂದ ಕಾರ್ಯಾಚರಣೆಗೆ ತಡೆಯಾಗಿದೆ ಎಂದು ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆಯ ಸಚಿವ ಉಮೇಶ ಕತ್ತಿ ಹೇಳಿದರು.

ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿಂದು ಮಾತನಾಡಿದ ಅವರು, ಈಗಿರುವ ಮೆಡಿಕಲ್ ಮಾಫಿಯಾ, ಇಂಜಿನಿಯರಿಂಗ್ ಏಜ್ಯುಕೇಶನ್ ಮಾಫಿಯಾ ಅದು ಕಾಂಗ್ರೆಸ್ ಸರ್ಕಾರ ಇದ್ದ ಸಂದರ್ಭದಲ್ಲಿ ನಡೆದು ಬಂದಿದೆ. ಇದಕ್ಕೆ ಕೇಂದ್ರ ಸರ್ಕಾರದ ನೇತೃತ್ವದಲ್ಲಿ ನರೇಂದ್ರ ಮೋದಿಯವರು ಎಲ್ಲ ವ್ಯವಸ್ಥೆ ಸರಿಪಡಿಸಲು ಸಿದ್ಧರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಮೋದಿಯವರು ನೀಟ್ ಜಾರಿಗೆ ತಂದಿದ್ದಾರೆ. ಇದರಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೀಟ್ ಸಿಗುತ್ತಿವೆ. ಇದರಲ್ಲಿ ಇನ್ನಷ್ಟು ಬದಲಾವಣೆ ಆಗಬೇಕು ಎಂಬುವಂತ ಆಶಯವಿದೆ ಎಂದು ಅವರು ಹೇಳಿದರು.

Edited By :
Kshetra Samachara

Kshetra Samachara

04/03/2022 11:36 am

Cinque Terre

32.43 K

Cinque Terre

12

ಸಂಬಂಧಿತ ಸುದ್ದಿ