ವರದಿ: ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ: ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಶರವೇಗದಲ್ಲಿ ಬೆಳೆಯುತ್ತಿದೆ. ಸದ್ಯ ಇದೇ ಭಾಗದವರು ಸಿಎಂ ಆಗಿದ್ದು, ಈ ಬಾರಿಯ ಬಜೆಟ್ ಮೇಲೆ ಜನರು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಅವಳಿ ನಗರದಲ್ಲಿಯ ಇಕ್ಕಟ್ಟಾದ ರಸ್ತೆಗಳನ್ನು 9 ಮೀಟರ್ ನಿಂದ 12 ಮೀಟರ್ ವರೆಗೆ ವಿಸ್ತರಿಸಲು ಅವಕಾಶವಿದೆ. ಆದರೆ, ಮುಂದಿನ 50 ವರ್ಷದ ಭವಿಷ್ಯ ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸುವ ಅವಶ್ಯಕತೆಯಿದೆ.
ಹಾಗಿದ್ದರೇ ಮೂಲಭೂತ ಸೌಕರ್ಯಗಳ ಸಮಸ್ಯೆ ಈ ಬಜೆಟ್ ನಲ್ಲಿ ಬಗೆಹರಿಯಲಿದೆಯೇ ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದ್ದು ಸಿಎಂ ಸಾಹೇಬ್ರು ಏನ್ ಮಾಡುತ್ತಾರೋ ಕಾದು ನೋಡಬೇಕಿದೆ.
ಇನ್ನು ಅವಳಿ ನಗರದ ರಸ್ತೆಗಳ ಅಗಲೀಕರಣಕ್ಕೆ ಮಾಸ್ಟರ್ ಪ್ಲಾನ್ ಅವಶ್ಯವಿದ್ದು ಈಗಾಗಲೇ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಸಿಡಿಪಿ, ಸಿಟಿ ಡೆವಲಪ್ ಮೆಂಟ್ ಪ್ರಾಜೆಕ್ಟ್ ತಯಾರಿಸುತ್ತಿದೆ. ಆದರೆ ಇದರಲ್ಲಿ ಮಾಸ್ಟರ್ ಪ್ಲಾನ್ ಪ್ರಸ್ತಾಪವಿಲ್ಲ.
ಒಟ್ಟಿನಲ್ಲಿ ಹುಬ್ಬಳ್ಳಿಯವರೇ ಸಿಎಂ ಆಗಿರುವ ಕಾರಣ ಬಜೆಟ್ ಮೇಲೆ ನಿರೀಕ್ಷೆ ಹೆಚ್ಚಿದೆ.
Kshetra Samachara
03/03/2022 11:09 pm