ಹುಬ್ಬಳ್ಳಿ: ಚುನಾವಣೆ ಮೊದಲು ಜನರಿಗಾಗಿ ಜನಪ್ರತಿನಿಧಿಗಳು ಕಾಯುತ್ತಾರೆ. ಆದರೆ ಚುನಾವಣೆ ಬಳಿಕ ಜನರೇ ಜನಪ್ರತಿನಿಧಿಗಳಿಗಾಗಿ ಕಾಯುವಂತಾಗಿದೆ. ಅಲ್ಲದೆ ಬಿಜೆಪಿ ನಾಯಕರ ಹಾಗೂ ಸಚಿವರ ಸಮಯ ಪ್ರಜ್ಞೆ ಎಷ್ಟಿದೆ ಎಂದರೇ 1-30ಕ್ಕೆ ನಡೆಯಬೇಕಿದ್ದ ಕಾರ್ಯಕ್ರಮ ಗಂಟೆ ಕಳೆದರೂ ಆರಂಭವಾಗಿಲ್ಲ.
ಗಬ್ಬೂರಿನ ಟ್ರಕ್ ಟರ್ಮಿನಲ್ ಜಂಕ್ಷನ್ ಬಳಿ ಕೇಂದ್ರ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ 12,795 ಕೋಟಿ ರೂಪಾಯಿ ವೆಚ್ಚದ 925 ಕಿ.ಮೀ. ಉದ್ದದ 26 ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಶಂಕುಸ್ಥಾಪನೆ ಮತ್ತು ರಾಷ್ಟ್ರಕ್ಕೆ ಲೋಕಾರ್ಪಣೆಗೊಳಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ನಿಗದಿತ ಸಮಯಕ್ಕಿಂತ ಗಂಟೆ ಕಳೆದರೂ ಯಾರೂ ಕೂಡ ಪತ್ತೆ ಇಲ್ಲದಂತಾಗಿದೆ.
ಇನ್ನೂ ಕಾರ್ಯಕ್ರಮಕ್ಕೆ ಆಗಮಿಸಿದ ಸಾರ್ವಜನಿಕರು ಕಾಯುತ್ತ ಕುಳಿತುಕೊಳ್ಳವಂತಾಯಿತು.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ವ್ಯವಹಾರಗಳ ಹಾಗೂ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್ ಜೋಶಿ, ವಿಧಾನ ಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ ಇತರೆ ಗಣ್ಯರು ಭಾಗವಹಿಸಲಿದ್ದು, ಸಚಿವ ಶ್ರೀರಾಮಲು ಮಾತ್ರ ಆಗಮಿಸಿ ವೇದಿಕೆಯಲ್ಲಿ ವೇಟ್ ಮಾಡುತ್ತಿದ್ದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
28/02/2022 03:21 pm