ಹುಬ್ಬಳ್ಳಿ: ಸದನದಲ್ಲಿ ಕಾಂಗ್ರೆಸ್ ಧರಣಿ ವಿಚಾರಕ್ಕೆ, ಬಿಜೆಪಿ ಅವರು ಕೊಡಲ್ಲ ಅಂತಾರೆ ಕಾಂಗ್ರೆಸ್‌ನವರು ಬಿಡಲ್ಲ ಅಂತಾರೆ. ಇದು ಗಂಡ ಹೆಂಡತಿ ನಡುವಿನ ಜಗಳಕ್ಕೆ ಕೂಸು ಘಾಸಿ ಬಿದ್ದಂತಾಗಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ಕರ್ನಾಟಕದ ಜನತೆಗೆ ನಾವು ಅನ್ಯಾಯ ಮಾಡುತ್ತಿದ್ದೇವೆ. ನಾನು ಸಭಾಪತಿಯಾಗಿ ಮಾತನಾಡುತ್ತಿಲ್ಲ. ಸಾಮಾನ್ಯ ಪ್ರಜೆಯಾಗಿ ಮಾತನಾಡುತ್ತಿದ್ದೇನೆ. ನಾವು ಜನರಿಗೆ ಮೋಸ, ಅವಮಾನ ಮಾಡುತ್ತಿದ್ದೇವೆ ಎಂದರು. ಪ್ರತಿಭಟನೆ ವಿಚಾರ ವಿರೋಧ ಪಕ್ಷದವರ ಮನವೊಲಿಸಲು ಪ್ರಯತ್ನ ಮಾಡುತ್ತೇನೆ. ಇದರ ಬಗ್ಗೆ ಬಹಳಷ್ಟು ನೋವಿದೆ. ಜನರ ಕೋಟ್ಯಾಂತರ ರೂಪಾಯಿ ಹಣ ವೇಸ್ಟ್ ಆಗುತ್ತಿದೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
19/02/2022 12:21 pm