ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ತಾಲೂಕು ಕಸಾಪ ದಿಂದ ಡಾ.ಚೆನ್ನವೀರ ಕಣವಿ ಅವರಿಗೆ ಶ್ರದ್ಧಾಂಜಲಿ

ಕಲಘಟಗಿ: ಚೆಂಬೆಳಕಿನ‌ ಕವಿ, ನಾಡೋಜ ಡಾ.ಚೆನ್ನವೀರ ಕಣವಿ ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ತಾಲೂಕ ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಪುರದನಗೌಡರ ತಿಳಿಸಿದರು.

ಅವರು ಪಟ್ಟಣದ ತಾಪಂ ಸಭಾಭವನದಲ್ಲಿ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿ, ಸತ್ವಯುತವಾದ ಕಾವ್ಯ ನೀಡಿ ಅಪರೂಪದ ಕವಿಯಾಗಿದ್ದರು. ಅವರಲ್ಲಿನ ಸಹೃದಯತೆ ಜನ ಸಾಮಾನ್ಯ ರೊಂದಿಗಿನ ಒಡನಾಟ ಅಪರೂಪವಾಗಿತ್ತು. ಕನ್ನಡ ಸಾಹಿತ್ಯ ಲೋಕದಲ್ಲಿ‌ ಚೆಂಬೆಳಕಿನ ಕವಿ ಎಂದೆ ಖ್ಯಾತರಾಗಿದ್ದ ಕಣವಿ ಅವರ ಅಗಲಿಕೆಯಿಂದ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಚಿತ್ರ ಕಲಾವಿದರಾದ ರಾಜು ಸೋಮನಗೌಡರ ಡಾ ಚನ್ನವೀರ ಕಣವಿ ಅವರ ಚಿತ್ರ ಬಿಡಿಸಿ ನಮನ ಸಲ್ಲಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪೂರ,ಹಿರಿಯ ಸಾಹಿತಿ ಎಂ ಎಂ ಪುರದನಗೌಡರ,ಪಿ.ಎಂ ಒಡೆಯರ,ಅಣ್ಣಪ್ಪ ಓಲೇಕಾರ,ರಮೇಶ ಸೋಲಾರಗೊಪ್ಪ,ವೈ.ಜಿ ಭಗವತಿ,ಆರ್.ಎಂ.ಹೂಲ್ತಿಕೋಟಿ,ಅಶೋಕ್ ಆಡಿನವರ,ಕಲ್ಲಪ್ಪ ಮಿರ್ಜಿ ,ಪ್ರಭು ರಂಗಾಪೂರ, ಸುಭಾಷ ನೂಲ್ವಿ , ಆರ್ ಎಪ್ ಸೋಮನಗೌಡ್ರ, ಐ ‌ವಿ ಜವಳಿ,ಕುಮಾರ ಕೆ ಎಫ್, ವಿಜಯಲಕ್ಷ್ಮಿ ದೇಶಪಾಂಡೆ, ಸೀತಮ್ಮ ಚಿನ್ನಮ್ಮನವರ,ಉದಯ ಗೌಡರ,ಪ್ರಕಾಶ ಲಮಾಣಿ ಹಾಗೂ ತಾಲೂಕ ಕಸಾಪ ಸದಸ್ಯರು ಉಪಸ್ಥಿರಿದ್ದರು.

Edited By :
Kshetra Samachara

Kshetra Samachara

17/02/2022 08:07 pm

Cinque Terre

8.16 K

Cinque Terre

0

ಸಂಬಂಧಿತ ಸುದ್ದಿ