ಧಾರವಾಡ: ನಾಡಿನ ಹೆಸರಾಂತ ಕವಿ ಡಾ.ಚೆನ್ನವೀರ ಕಣವಿ ಅವರು ರಾಷ್ಟ್ರಕವಿಯಾಗುವುದಕ್ಕೆ ನನ್ನ ಸಹಮತವೂ ಇದೆ. ಈ ಬಗ್ಗೆ ನಾನೂ ಪ್ರಯತ್ನ ಮಾಡುತ್ತೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಿಂದ ಬಂದ ತಕ್ಷಣ ಕಣವಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದೇನೆ. ಕಣವಿ ಅವರಿಗೆ ರಾಷ್ಟ್ರ ಕವಿ ಗೌರವ ನೀಡಬೇಕು ಎಂದು ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಬಂದಿರುವ ಪತ್ರದ ಬಗ್ಗೆ ನನ್ನ ಗಮನಕ್ಕಿಲ್ಲ. ಕಣವಿ ಮೃದು ಸ್ವಭಾವದ ವ್ಯಕ್ತಿ. ರಾಷ್ಟ್ರ ಕವಿ ಗೌರವಕ್ಕೆ ಕಣವಿ ಅರ್ಹರು. ಈ ಬಗ್ಗೆ ನಾನೂ ಪ್ರಯತ್ನ ಮಾಡುತ್ತೇನೆ ಎಂದರು.
ಕಣವಿ ಅವರು ನಮಗೆಲ್ಲರಿಗೂ ಆತ್ಮೀಯರು. ಒಂದು ತಿಂಗಳಿನಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ವಯೋಸಹಜ ಕಾಯಿಲೆಯಿಂದಾಗಿ ಅವರು ಶೀಘ್ರ ಗುಣಮುಖರಾಗುತ್ತಿಲ್ಲ. ಡಾ.ನಿರಂಜನಕುಮಾರ ಅವರ ತಂಡವು ಕಣವಿ ಅವರ ಆರೋಗ್ಯವನ್ನು ನೋಡಿಕೊಳ್ಳುತ್ತಿದೆ. ಚಿಕಿತ್ಸೆಗೆ ಕಣವಿ ಅವರೂ ಸ್ಪಂದಿಸುತ್ತಿದ್ದು, ಅವರು ಶೀಘ್ರ ಗುಣಮುಖರಾಗಬೇಕಿದೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ವೈಯಕ್ತಿಕವಾಗಿ ನನಗೂ ಕಳವಳವಾಗುತ್ತಿದೆ ಎಂದರು.
Kshetra Samachara
15/02/2022 03:54 pm