ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಿಎಂ ಇಬ್ರಾಹಿಂ ಪಕ್ಷ ಬಿಟ್ಟು ಹೋಗಲ್ಲ; ಜಮೀರ್ ಅಹ್ಮದ್ ವಿಶ್ವಾಸ

ಹುಬ್ಬಳ್ಳಿ: ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಅವರು ಕಾಂಗ್ರೆಸ್ ಬಿಟ್ಟು ಹೋಗಲ್ಲ ಎಂಬ ವಿಶ್ವಾಸ ನನಗಿದೆ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಬಿಟ್ಟು ಇಬ್ರಾಹಿಂ ಅವರು ಹೋಗಲ್ಲ.

ಮೊನ್ನೆ ಸಿದ್ದರಾಮಯ್ಯ ಜೊತೆಗೆ ಮಾತನಾಡಿದ್ದಾರೆ. ಇವತ್ತು ಹುಬ್ಬಳ್ಳಿಗೆ ಅವರು ಬಂದಿದ್ದಾರೆ. ಅವರನ್ನೇ ಕೇಳಿ ಎಂದರು.

ನಮ್ಮ ಹಿರಿಯ ನಾಯಕರು ಸಿಎಂ ಇಬ್ರಾಹಿಂ ಅವರ ಮನವೋಲಿಸಿದ್ದಾರೆ. ಅವರ ಎದರು ನಾನು ಬಚ್ಚಾ, ಅವರು ನನ್ನ ನಾಯಕರು. ಕಾಂಗ್ರೆಸ್‌ನಲ್ಲೇ ಉಳಿಯಲು ಸಿಎಂ ಇಬ್ರಾಹಿಂ ಒಪ್ಪಿಕೊಂಡಿದ್ದಾರೆ ಎಂದರು. ಸಿಎಂ ಇಬ್ರಾಹಿಂ 40 ಕೋಟಿ ರೂ. ಸಾಲದ ಬಗ್ಗೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಜಮೀರ್ ಅಹ್ಮದ್, 'ನಮ್ಮ ಮುಂದೆ ಅವರು ಸಾಲದ ಬಗ್ಗೆ ಬೇಡಿಕೆ ಇಟ್ಟಿಲ್ಲ' ಎಂದರು.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

13/02/2022 02:12 pm

Cinque Terre

91.96 K

Cinque Terre

3

ಸಂಬಂಧಿತ ಸುದ್ದಿ