ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿಜಾಬ್ ಅವಕಾಶ ನೀಡದಿದ್ದರೇ ರಕ್ತಪಾತ;ಹೀಗಂದ ರೋಜಾಲಿನ ಪೀಟರ್ ವಿರುದ್ಧ ದೂರು

ಹುಬ್ಬಳ್ಳಿ: ಹಿಜಾಬ್ ಪ್ರತಿಭಟನೆ ವೇಳೆ ಕೋಮು ಗಲಭೆ ಸೃಷ್ಟಿಸುವ ಪ್ರಚೋದನಾತ್ಮಕ ಭಾಷಣ ಮಾಡಿದ ಹಿನ್ನೆಲೆಯಲ್ಲಿ ರೋಜಾಲಿನ ಪೀಟರ್ ಅವರ ಮೇಲೆ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳವಾರ ನಗರದ ಮಿನಿವಿಧಾನ ಸೌಧದ ಎದುರು ಅಂಜುಮನ್ ಇಸ್ಲಾಂ ಸಂಸ್ಥೆಯ ವತಿಯಿಂದ ಪ್ರತಿಭಟನೆ ನಡೆದಿತ್ತು.ಮುಸ್ಲಿಂ ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಕೊಂಡು ಶಾಲೆಗೆ ಬರಲು ಅನುಮತಿ ನೀಡಬೇಕು ಅನ್ನೋದೆ ಈ ಪ್ರತಿಭಟನೆ ಮೂಲ ಉದ್ದೇಶ. ಈ ಪ್ರತಿಭಟನೆಯಲ್ಲಿಯೇ ರೋಜಾಲಿನ ಪೀಟರ್ ಪ್ರತಿಭಟನೆ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ.

ಸರ್ಕಾರ ಈ ಹಿಂದಿನಂತೆ ಮುಸ್ಲಿಂ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಹಿಜಾಬ್ ಧರಿಸಲು ಅವಕಾಶ ಮತ್ತು ರಕ್ಷಣೆ ನೀಡಬೇಕು ಇಲ್ಲವಾದಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿ ರಕ್ತ ಪಾತವಾಗುತ್ತವೇ ಆಗುತ್ತದೆ ಎಂದು ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Edited By :
Kshetra Samachara

Kshetra Samachara

12/02/2022 03:08 pm

Cinque Terre

9.58 K

Cinque Terre

5

ಸಂಬಂಧಿತ ಸುದ್ದಿ