ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಇಸ್ಮಾಯಿಲ್ ತಮಟಗಾರ, ಅಯೂಬ್ ಖಾನ್ ಭಾವಚಿತ್ರ ದಹನ

ಕುಂದಗೋಳ : ಭಾವೈಕ್ಯತೆಯ ದೇಶವಾದ ಭಾರತದಲ್ಲಿ ಗೋಮ್ಮಟೇಶ್ವರ ಮೂರ್ತಿ ಕುರಿತು ಅವಹೇಳನವಾಗಿ ಮಾತನಾಡಿದ ಅಯೂಬ್ ಖಾನ್ ಹಾಗೂ ಶಾಸಕ ಬಸವರಾಜ ಯತ್ನಾಳ್ ಅವರ ವಿರುದ್ಧ ಏಕವಚನದಲ್ಲಿ ಹಿಜಾಬ್ ಸಂಬಂಧಿತ ಮಾತಿನ ಭರದಲ್ಲಿ ನಾಲಿಗೆ ಹರಿಬಿಟ್ಟ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ ಅವರ ಮಾತನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಆಯೂಬ್ ಖಾನ್ ಹಾಗೂ ಇಸ್ಮಾಯಿಲ್ ತಮಟಗಾರ ಅವರ ಭಾವಚಿತ್ರ ದಹಿಸಿ ಆಕ್ರೋಶ್ ಹೊರ ಹಾಕಿದರು.

ಕುಂದಗೋಳ ಪಟ್ಟಣದ ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯಲ್ಲಿ ಸೇರಿದ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಆಯೂಬ್ ಖಾನ್ ಹಾಗೂ ಇಸ್ಮಾಯಿಲ್ ತಮಟಗಾರ ಭಾವಚಿತ್ರ ದಹಿಸಿ ಯಾವುದೇ ವ್ಯಕ್ತಿ ಹಾಗೂ ಧಾರ್ಮಿಕ ಪದ್ಧತಿ ಕುರಿತು ಮನ ಬಂದಂತೆ ಮಾತನಾಡಿದ್ರೇ ಉಗ್ರ ಹೋರಾಟ ಕೈಗೊಳ್ಳುವ ಎಚ್ಚರಿಕೆ ಸ‌ಹ ನೀಡಿದರು.

ಈ ಸಂದರ್ಭದಲ್ಲಿ ಕುಂದಗೋಳ ತಾಲೂಕಿನ ಸಮಸ್ತ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

11/02/2022 04:27 pm

Cinque Terre

37.75 K

Cinque Terre

10

ಸಂಬಂಧಿತ ಸುದ್ದಿ