ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಕ್ಕಳಲ್ಲಿ ಜಾತಿ ಎಂಬ ವಿಷ ಬೀಜ ಬಿತ್ತುವುದು ಸರಿಯಲ್ಲ; ಬಿಜೆಪಿ ವಿರುದ್ಧ ಅಬ್ಬಯ್ಯ ಗರಂ

ಹುಬ್ಬಳ್ಳಿ: ಬಿಜೆಪಿ ನಾಯಕರು ಜಾತಿಯ ವಿಷ ಬೀಜ ಬಿತ್ತುತ್ತಾರೆ. ಸಣ್ಣ ಸಣ್ಣ ಮಕ್ಕಳಲ್ಲಿಯೂ ಸಹ ನಾ ಹಿಂದೂ ನಾ ಮುಸ್ಲಿಂ ಎಂಬ ಭಾವನೆ ಮೂಡುವ ಹಾಗೆ ಮಾಡಿದ್ದಾರೆಂದು ಶಾಸಕ ಪ್ರಸಾದ್ ಅಬ್ಬಯ್ಯ ಬಿಜೆಪಿ ವಿರುದ್ಧ ಕಿಡಿ ಕಾರಿದರು.

ಹಿಜಾಬ್ ವಿವಾದದ ಕುರಿತು ನಗರದಲ್ಲಿ ಇಂದು ಮಾತನಾಡಿದ ಅವರು, 'ನಮ್ಮ ಸರ್ಕಾರ ಇದ್ದಾಗ ಯಾವುದೇ ಜಾತಿ ಭೇದ ಭಾವವಿಲ್ಲದೇ ಹಿಂದೂ ಮುಸ್ಲಿಂ ಕ್ರೈಸ್ತ ನಾವೆಲ್ಲರೂ ವಂದೇ ಎಂಬ ಭಾವನಾತ್ಮಕದಿಂದ ಎಲ್ಲರೂ ಒಗ್ಗಟ್ಟಿನಿಂದ ಇದ್ದರು. ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ ಮಕ್ಕಳಲ್ಲೂ ಸಹ ಜಾತಿ ವಿಷ ಬೀಜ ಬಿತ್ತುತ್ತಿರುವುದು ಆತಂಕ ಸೃಷ್ಟಿಸಿದೆ. ಇಂತಹ ವಿಚಾರ ಬಿಟ್ಟು, ದೇಶ ಹಾಗೂ ರಾಜ್ಯದ ಪ್ರಗತಿ ಬಗ್ಗೆ ವಿಚಾರ ಮಾಡಿ' ಎಂದರು.

ಇನ್ನು ಬಿಜೆಪಿ ಜಾತಿವಾದಿ, ಕೋಮುವಾದಿ ಪಕ್ಷವನ್ನು ಬೇರು ಸಮೇತ ಕಿತ್ತು ಒಗೆಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

Edited By : Nagesh Gaonkar
Kshetra Samachara

Kshetra Samachara

07/02/2022 06:48 pm

Cinque Terre

17.24 K

Cinque Terre

11

ಸಂಬಂಧಿತ ಸುದ್ದಿ