ಅಣ್ಣಿಗೇರಿ; ಜನವರಿ 26 ಗಣರಾಜ್ಯೋತ್ಸವ ದಿನದಂದು ರಾಯಚೂರಿನ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರು ಅಂಬೇಡ್ಕರ್ ಅವರ ಭಾವಚಿತ್ರ ಇಟ್ಟರೆ ನಾನು ಧ್ವಜಾರೋಹಣ ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂಬ ಹೇಳಿಕೆ ನೀಡಿದ್ದರಿಂದ ರಾಜ್ಯಾದ್ಯಂತ ಈಗಾಗಲೇ ದಲಿತ ಪರ ಸಂಘಟನೆಗಳು ಪ್ರತಿಭಟನೆಯನ್ನು ನಡೆಸುತ್ತಲೇ ಇದ್ದಾರೆ.
ಇಂದು ಕೂಡ ಅಣ್ಣಿಗೇರಿ ಪಟ್ಟಣದಲ್ಲಿ ವಿವಿಧ ದಲಿತ ಪರ ಸಂಘಟನೆಗಳು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ಮಾಡಿ ಕೊನೆಗೆ ಪುರಸಭೆಯ ಹತ್ತಿರ ಮಲ್ಲಿಕಾರ್ಜುನ್ ಗೌಡ ಅವರ ಶವ ಸಂಸ್ಕಾರ ಮಾಡಿ ತಾಲೂಕಿನ ದಂಡಾಧಿಕಾರಿ ಮಂಜುನಾಥ್ ಅಮಾಸೆ ಅವರಿಗೆ ಹಾಗೂ ಪಿ.ಎಸ್.ಐ. ಲಾಲ್ ಸಾಬ್ ಜೂಲಕಟ್ಟಿ ಅವರಿಗೆ ಮನವಿ ಪತ್ರ ನೀಡಿದರು.
ಈ ವೇಳೆ ಮಾತನಾಡಿದ ಯೋಗೀಶ್ ಚಲವಾದಿ ಅವರು ನ್ಯಾಯಮೂರ್ತಿಯ ವಿರುದ್ಧ ಸೂಕ್ತ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದೆ ಹೋದರೆ ಬರುವ ದಿನಗಳಲ್ಲಿ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಕೆ ನೀಡಿದರು. ಈ ವೇಳೆ ದಲಿತ ಪರ ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
05/02/2022 07:01 pm