ಅಣ್ಣಿಗೇರಿ: ಕೃಷಿ ಸಲಕರಣೆಗಳ ಸಂಶೋಧಕ ಅಬ್ದುಲ್ ಖಾದರ್ ನಡಕಟ್ಟಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ರಾಜ್ಯ ಸೇರಿದಂತೆ ಜಿಲ್ಲೆಯ ಅನೇಕ ಗಣ್ಯರು ಅಭಿನಂದಿಸಿ ಗೌರವಿಸುತ್ತಿದ್ದಾರೆ. ಇಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ನಡಕಟ್ಟಿನ ಅವರ ನಿವಾಸಕ್ಕೆ ಬಂದು ಗೌರವಪೂರ್ವಕವಾಗಿ ಸನ್ಮಾನಿಸಿದರು.
ಇನ್ನು ಅಬ್ದುಲ್ ಖಾದರ್ ನಡಕಟ್ಟಿ ಅವರು ಆವಿಷ್ಕರಿಸಿರುವ ಕೃಷಿ ಸಲಕರಣೆಗಳನ್ನು ಜಗದೀಶ್ ಶೆಟ್ಟರ್ ಹಾಗೂ ಶಂಕರ್ ಪಾಟೀಲ್ ಮುನೇನಕೊಪ್ಪ ವೀಕ್ಷಿಸಿದರು.
Kshetra Samachara
01/02/2022 09:51 am