ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಸ್ತುವಾರಿ ಬದಲಾವಣೆಗೆ ಸುಸ್ತಾದ ಧಾರವಾಡ ಜಿಲ್ಲೆ: ಸಿಎಂ ನಿರ್ಧಾರಕ್ಕೆ ಸ್ವಪಕ್ಷದಲ್ಲಿಯೇ ಅಸಮಾಧಾನ...!

ಹುಬ್ಬಳ್ಳಿ: ಅದು ಉತ್ತರ ಕರ್ನಾಟಕದ ಹೆಬ್ಬಾಗಿಲು. ಮಾಜಿಸಿಎಂ ಹಾಗೂ ಸಿಎಂ ಅವರ ತವರು ಜಿಲ್ಲೆ. ಈ ಜಿಲ್ಲೆಯಲ್ಲಿ ತಕ್ಕಮಟ್ಟಿಗೆ ಅಭಿವೃದ್ಧಿ ಕಾರ್ಯಗಳು ಆಗುತ್ತಿವೆ ಎನ್ನುವಷ್ಟರಲ್ಲಿಯೇ ಸರ್ಕಾರ ನಿರ್ಧಾರ ಅಭಿವೃದ್ಧಿ ಕಾರ್ಯಕ್ಕೆ ಕುಂಠಿತವನ್ನುಂಟು ಮಾಡಿದೆ. ಏನಿದು ನಿರ್ಧಾರ ಅಂತೀರಾ ಇಲ್ಲಿದೆ ನೋಡಿ ಕಂಪ್ಲಿಟ್ ಡಿಟೈಲ್ಸ್..

ಹೌದು.. ಸಿಎಂ ಬಸವರಾಜ ಬೊಮ್ಮಾಯಿಯವರ ನೇತೃತ್ವದ ರಾಜ್ಯ ಸರ್ಕಾರಲ್ಲಿ ಈ ಹಿಂದೆ ನೀಡಲಾಗಿದ್ದ ಉಸ್ತುವಾರಿಯನ್ನು ಬದಲಾವಣೆ ಮಾಡಿದ್ದು, ಧಾರವಾಡ ಜಿಲ್ಲೆಗೆ ಶಂಕರ ಪಾಟೀಲ ಮುನೇನಕೊಪ್ಪ ಅವರಿಗೆ ನೀಡಿತ್ತು. ಅಲ್ಲದೆ ತವರು ಜಿಲ್ಲೆಯ ಉಸ್ತುವಾರಿಯಾಗಿದ್ದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರಿಗೆ ರಾಯಚೂರು ಜಿಲ್ಲೆಯ ಉಸ್ತುವಾರಿ ನೀಡಿದ್ದು, ಈಗ ಹಾಲಪ್ಪ ಆಚಾರ ಅವರಿಗೆ ನೀಡಿದ್ದು, ಸಿಎಂ ನಿರ್ಧಾರಕ್ಕೆ ಹಾಗೂ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಸ್ವಪಕ್ಷೀಯರಿಂದಲೇ ಅಸಮಾಧಾನ ವ್ಯಕ್ತವಾಗುತ್ತಿದೆ.

ಇನ್ನೂ ಆಯಾ ಜಿಲ್ಲೆಯ ಸಚಿವರಿಗೆ ಉಸ್ತುವಾರಿ ನೀಡಬೇಕಿತ್ತು. ಇದು ನನ್ನ ವಯುಕ್ತಿಕ ಅಭಿಪ್ರಾಯ ಎಂದು ಹೇಳುವ ಮೂಲಕ ಮಾಜಿ‌ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಜಿಲ್ಲಾ ಉಸ್ತುವಾರಿ ನೇಮಕದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ ಅಭಿವೃದ್ಧಿ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿಗಳ ಬದಲಾವಣೆಯಿಂದ ಬಲವಾದ ಹೊಡೆತ ಬಿದ್ದಿದೆ. ಇಲ್ಲಿಯವರಲ್ಲದೇ ಇರುವ ಪ್ರತಿನಿಧಿಗಳಿಗೆ ಉಸ್ತುವಾರಿ ಕೊಟ್ಟರೇ ಮತ್ತಷ್ಟು ಸಮಸ್ಯೆ ಆಗುತ್ತದೆ ಎಂಬುವುದು ಇಲ್ಲಿನ ಜನರ ಮಾತು.

ಒಟ್ಟಿನಲ್ಲಿ ಸರ್ಕಾರದ ದಿನಕ್ಕೊಂದು ನಿರ್ಧಾರದಿಂದ ಅಭಿವೃದ್ಧಿಕ್ಕೆ ಬಲವಾದ ಪೆಟ್ಟು ಬಿಳುವುದಂತೂ ಸತ್ಯ. ಕೂಡಲೇ ಸಿಎಂ ಬಸವರಾಜ ಬೊಮ್ಮಾಯಿಯವರು, ಈ ಬಗ್ಗೆ ಸೂಕ್ತ ಕ್ರಮಗಳನ್ನು ಜರುಗಿಸಿ ಸ್ಥಳೀಯ ಚುನಾಯಿತ ಪ್ರತಿನಿಧಿಗಳಿಗೆ ಉಸ್ತುವಾರಿ ನೀಡಬೇಕಿದೆ.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

27/01/2022 05:33 pm

Cinque Terre

153.39 K

Cinque Terre

15

ಸಂಬಂಧಿತ ಸುದ್ದಿ