ವರದಿ:ಬಿ.ನಂದೀಶ
ಅಣ್ಣಿಗೇರಿ; ಪಟ್ಟಣದ ಪುರಸಭೆ ಚುನಾವಣೆ ಶಾಂತಿಯುತವಾಗಿ ಮತದಾನ ನಡೆದಿದ್ದು ಡಿಸೆಂಬರ್ 30 ಫಲಿತಾಂಶ ಹೊರಬಿದ್ದಿದೆ, ಆದರೆ ರಾಜಕೀಯ ನಾಯಕರಲ್ಲಿ ಅಧಿಕಾರಕ್ಕಾಗಿ ಕಸರತ್ತು ಪ್ರಾರಂಭವಾಗಿದೆ.
ಈಗಾಗಲೇ ಕಾಂಗ್ರೆಸ್ 12, ಬಿಜೆಪಿ 5, ಪಕ್ಷೇತರರು 6 ಸ್ಥಾನಗಳನ್ನು ಪಡೆದಿದ್ದಾರೆ, ಪುರಸಭೆ ಆಡಳಿತದ ಗದ್ದುಗೆಯನ್ನು ಹೇರ ಬೇಕಾದರೆ 13 ಸ್ಥಾನಗಳು ಬೇಕಾಗಿದೆ. ಯಾವ ಪಕ್ಷವೂ ಇಷ್ಟು ಸ್ಥಾನವನ್ನು ಹೊಂದಿರುವುದಿಲ್ಲ. ಆದರೆ ಕಾಂಗ್ರೆಸ್ ಪಕ್ಷ ಈಗಾಗಲೇ 4 ನೇ ವಾರ್ಡಿನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಹಾಗೂ ಒಂದನೇ ವಾರ್ಡಿನ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ ಹಿನ್ನೆಲೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಗೊಂಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷ 14 ಸದಸ್ಯ ಬಲ ಹೊಂದಿರುತ್ತದೆ.
ಆದರೆ ಚುನಾವಣಾ ಆಯೋಗದ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಜಾತಿಯ ಮಹಿಳೆಗೆ ಮೀಸಲಾತಿ ನಿಗದಿ ಮಾಡಿದೆ. ಆದರೆ ಹೆಚ್ಚು ಸ್ಥಾನಕ್ಕಾಗಿ ಸಂಖ್ಯಾಬಲ ಹೊಂದಿರುವ ಕಾಂಗ್ರೆಸ್ ಪಕ್ಷದಲ್ಲಿ ಪರಿಶಿಷ್ಟ ಜಾತಿಯ ಮಹಿಳೆ ಇಲ್ಲದಿರುವುದ ರಿಂದ ಬಿಜೆಪಿ ಗೆ ಅವಕಾಶದ ಬಾಗಿಲು ತೆರೆದಂತಾಗಿದೆ.
ಇದರ ಹಿನ್ನೆಲೆಯಲ್ಲಿ ಮಾಜಿ ಶಾಸಕ ಕೋನರೆಡ್ಡಿ ಮೀಸಲಾತಿ ನಿಗದಿಗೆ ಆಗ್ರಹ ಮಾಡುತ್ತಿದ್ದಾರೆ, ಪಟ್ಟಣದ ಪುರಸಭೆಯ ಮೀಸಲಾತಿಯು ಇಲ್ಲಿಯವರೆಗೂ ಸರ್ಕಾರ ನಿಗದಿಪಡಿಸಿಲ್ಲ, ಸರಕಾರ ತಕ್ಷಣವೇ ರೋಸ್ಟರ್ ಪದ್ಧತಿ ಪ್ರಕಾರ ಮೀಸಲಾತಿ ನಿಗದಿ ಪಡಿಸಬೇಕು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
Kshetra Samachara
05/01/2022 07:16 pm