ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಇಬ್ಬರು ಪಾಲಿಕೆ ಸದಸ್ಯರು ಸೇರಿ ಗ್ರಾಮಸ್ಥರ ಬಂಧನ.. ಬಿಡುಗಡೆ

ಧಾರವಾಡ: ಬಿಆರ್‌ಟಿಎಸ್ ಕಾಮಗಾರಿ ವಿಚಾರಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಇಬ್ಬರು ಸದಸ್ಯರು ಸೇರಿದಂತೆ ನವಲೂರು ಗ್ರಾಮದ ಕೆಲ ಗ್ರಾಮಸ್ಥರನ್ನು ವಿದ್ಯಾಗಿರಿ ಠಾಣೆ ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದ್ದಾರೆ.

ನವಲೂರು ಗ್ರಾಮದ ಬಳಿ ಬಿಆರ್‌ಟಿಎಸ್ ಸಂಸ್ಥೆ ರಸ್ತೆ ಕಾಮಗಾರಿ ನಡೆಸುತ್ತಿದೆ. ನವಲೂರು ಛಾವಣಿ ಮುಂದೆ ಬಸ್ ನಿಲ್ದಾಣ ಮಾಡಬೇಕು ಹಾಗೂ ರಸ್ತೆ ನಿರ್ಮಾಣ ಕಾಮಗಾರಿಯನ್ನು ಎತ್ತರಕ್ಕೆ ಮಾಡಬಾರದು ಅದರಿಂದ ನವಲೂರು ಗ್ರಾಮ ತಗ್ಗು ಪ್ರದೇಶದಲ್ಲಿ ಉಳಿಯುತ್ತದೆ ಎಂದು ಈ ಹಿಂದೆಯೇ ನವಲೂರು ಗ್ರಾಮಸ್ಥರು ಒತ್ತಾಯಿಸಿದ್ದರು. ಒತ್ತಾಯಕ್ಕೆ ಮಣಿದಿದ್ದ ಬಿಆರ್‌ಟಿಎಸ್ ಸಂಸ್ಥೆ ಹಾಗೂ ಜಿಲ್ಲಾಧಿಕಾರಿಗಳು ನವಲೂರು ಗ್ರಾಮಸ್ಥರ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಆದರೆ, ಇಂದು ಏಕಾಏಕಿ ಹಳೆಯ ರೀತಿಯಲ್ಲೇ ಕಾಮಗಾರಿ ನಡೆಸಲು ಮುಂದಾಗಿದ್ದ ಸಿಬ್ಬಂದಿಗೆ ಗ್ರಾಮಸ್ಥರು ಬಿಸಿ ಮುಟ್ಟಿಸಿದ್ದಾರೆ. ಪಾಲಿಕೆ ಸದಸ್ಯರಾದ ಡಾ.ಮಯೂರ ಮೋರೆ ಹಾಗೂ ಮಂಜುನಾಥ ಬಡಕುರಿ ನೇತೃತ್ವದಲ್ಲಿ ನವಲೂರು ಗ್ರಾಮಸ್ಥರು ನವಲೂರು ಬಳಿ ಪ್ರತಿಭಟನೆ ನಡೆಸಿದರು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಪಾಲಿಕೆ ಸದಸ್ಯರು ಸೇರಿದಂತೆ ಅನೇಕರನ್ನು ಬಂಧಿಸಿ ಕರೆದೊಯ್ದು ನಂತರ ಬಿಡುಗಡೆ ಮಾಡಿದ್ದಾರೆ.

ಈ ಹಿಂದೆಯೇ ಜಿಲ್ಲಾಧಿಕಾರಿಗಳು ಈ ಕುರಿತು ಪರಿಶೀಲನೆ ನಡೆಸಿ ಗ್ರಾಮಸ್ಥರಿಗೆ ಅನುಕೂಲವಾಗುವ ರೀತಿಯಲ್ಲಿ ಕಾಮಗಾರಿ ನಡೆಸುವುದಾಗಿ ಭರವಸೆ ನೀಡಿದ್ದರು. ಆದರೆ, ಈಗ ಏಕಾಏಕಿ ಹಳೆಯ ಮಾದರಿಯಲ್ಲೇ ಕಾಮಗಾರಿ ನಡೆಸಲು ಮುಂದಾಗಿದ್ದಾರೆ ಎಂದು ಪಾಲಿಕೆ ಸದಸ್ಯ ಡಾ.ಮಯೂರ ಮೋರೆ ಆರೋಪಿಸಿದರು.

ಇಂದು ನಡೆಯಬೇಕಿದ್ದ ಕಾಮಗಾರಿಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರಿಂದ ಪಾಲಿಕೆ ಸದಸ್ಯರಾದ ಮಂಜುನಾಥ ಬಡಕುರಿ ಹಾಗೂ ಡಾ.ಮಯೂರ ಮೋರೆ ಅವರ ಜೊತೆಗೆ ಅನೇಕರನ್ನು ಪೊಲೀಸರು ಬಂಧಿಸಿ ಕರೆದೊಯ್ದು ನಂತರ ಬಿಡುಗಡೆ ಮಾಡಿದ್ದಾರೆ. ಆದರೆ, ಗ್ರಾಮಸ್ಥರಿಗೆ ಅನುಕೂಲ ಆಗುವ ರೀತಿಯಲ್ಲಿ ಕಾಮಗಾರಿ ನಡೆಸಬೇಕು ಇಲ್ಲದೇ ಹೋದರೆ ಮುಂದೆ ಉಗ್ರ ಹೋರಾಟ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

05/01/2022 03:40 pm

Cinque Terre

34.58 K

Cinque Terre

2

ಸಂಬಂಧಿತ ಸುದ್ದಿ