ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮೀಸಲಾತಿ ಕಾನೂನು ಪ್ರಕಾರ ಪ್ರಕಟಿಸಿ: ಕೋನರಡ್ಡಿ

ಧಾರವಾಡ: ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ನಡೆದು ನಾಲ್ಕು ತಿಂಗಳು ಕಳೆದರೂ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಿಲ್ಲ. ಅದೇ ರೀತಿ ಅಣ್ಣಿಗೇರಿ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೂ ಕೂಡಲೇ ಮೀಸಲಾತಿ ಪ್ರಕಟಿಸಬೇಕು ಎಂದು ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಆಗ್ರಹಿಸಿದರು.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ತಮಗೆ ಬೇಕಾದ ಮೀಸಲಾತಿ ಪ್ರಕಟಿಸುವ ಹುನ್ನಾರ ನಡೆಸಿದ್ದಾರೆ. ಕಾನೂನು ಪ್ರಕಾರ ಮೀಸಲಾತಿ ಪ್ರಕಟಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ ಎಂದರು

ಅಣ್ಣಿಗೇರಿ ಪುರಸಭೆಯಲ್ಲಿ ಕಾಂಗ್ರೆಸ್ 12 ಸೀಟು ಗೆದ್ದಿದೆ. ಇಬ್ಬರು ಪಕ್ಷೇತರರ ಸಹಾಯದಿಂದ ಇದೀಗ ಕಾಂಗ್ರೆಸ್ ಸಂಪೂರ್ಣ ಬಹುಮತದಲ್ಲಿದೆ. ಕೂಡಲೇ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕಾನೂನು ಪ್ರಕಾರ ಮೀಸಲಾತಿ ಪ್ರಕಟಿಸಬೇಕು ಎಂದರು.

ಡಿಸಿ ಅವರ ತಮ್ಮ ಮನೆಯಲ್ಲಿ ಬರ್ತಡೇ ಪಾರ್ಟಿ ಮಾಡಿದ ವಿಚಾರ ನನಗೆ ಗೊತ್ತಿಲ್ಲ. 100 ಜನರನ್ನು ಸೇರಿಸಿ ಪಾರ್ಟಿ ಮಾಡಿದ್ದರೆ ಏನೂ ಸಮಸ್ಯೆ ಇಲ್ಲ. ಮಂತ್ರಿ ತಪ್ಪು ಮಾಡಿದರೆ ಅವರ ಮೇಲೆ ಮುಖ್ಯಮಂತ್ರಿ ಇರುತ್ತಾರೆ. ಒಬ್ಬ ಡಿಸಿ ತಪ್ಪು ಮಾಡಿದರೆ ಅವರ ಮೇಲೆ ಮುಖ್ಯ ಕಾರ್ಯದರ್ಶಿ ಇರುತ್ತಾರೆ ಅವರೇ ವಿಚಾರ ಮಾಡುತ್ತಾರೆ ಎಂದರು.

Edited By : Nagesh Gaonkar
Kshetra Samachara

Kshetra Samachara

05/01/2022 03:23 pm

Cinque Terre

17.18 K

Cinque Terre

0

ಸಂಬಂಧಿತ ಸುದ್ದಿ