ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್....
ಈರಣ್ಣ ವಾಲಿಕಾರ
ಹುಬ್ಬಳ್ಳಿ: ಇದು ಪಬ್ಲಿಕ್ ಇಂಪ್ಯಾಕ್ಟ್...ಪ್ರಯಾಣಿಕರ ಜೀವಕ್ಕೆ ಕುತ್ತಾಗಿದ್ದ ಬಿಜೆಪಿ ಬಂಟಿಂಗ್ಸ್‌ಗಳನ್ನು ಕಾರ್ಯಕರ್ತರು ತೆರವುಗೊಳಿಸಿದ್ದಾರೆ. ನಿನ್ನೆ ಸೋಮವಾರ ನಿಮ್ಮ ಪಬ್ಲಿಕ್ ನೆಕ್ಸ್ಟ್ ಈ ಬಗ್ಗೆ ವರದಿ ಬಿತ್ತರಿಸಿತ್ತು.
ಕಳೆದ ಒಂದು ವಾರದ ಹಿಂದೆ ಹುಬ್ಬಳ್ಳಿಯಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಣಿ ಸಭೆ ನಡೆಸಿದ್ದರು. ಬಿಜೆಪಿ ನಾಯಕರು ತಮ್ಮ ಪಕ್ಷದ ಬಂಟಿಗ್ಸ್‌ಗಳು ಇಡೀ ಹುಬ್ಬಳ್ಳಿಯ ರಸ್ತೆ ತುಂಬ ರಾರಾಜಿಸುವಂತೆ ಮಾಡಿದ್ದರು. ಅದೇ ರೀತಿ ನಗರದ ಆಕ್ಸ್‌ಫರ್ಡ್ ಕಾಲೇಜು ಬಳಿ ಇರುವ ಬ್ರಿಡ್ಜ್ ಮೇಲೆ ಹಾಕಿರುವ ತೋರಣ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿತ್ತು. ಈ ಈ ಸಮಸ್ಯೆ ಕುರಿತು ನಿಮ್ಮ ಪಬ್ಲಿಕ್ ನೆಕ್ಸ್ಟ್ ಪ್ರಯಾಣಿಕರ ಜೀವಕ್ಕೆ ಕುತ್ತಾಗಿವೆ ಬಿಜೆಪಿ ತೋರಣ ಎಂಬ ಶೀರ್ಷಿಕೆ ಅಡಿಯಲ್ಲಿ ಸುದ್ದಿಯನ್ನು ಬಿತ್ತರಿಸಿತ್ತು.
ಸುದ್ದಿಯನ್ನು ನೋಡಿದ ಬಿಜೆಪಿ ಮುಖಂಡರು ಈಗ ಆ ತೋರಣಗಳನ್ನು ತೆರವುಗೋಳಿಸಿ ಪ್ರಯಾಣಿಕರ ತೊಂದರೆ ತಪ್ಪಿಸಿದ್ದಾರೆ. ಈ ಕಾರ್ಯಕ್ಕೆ ಕೆಲ ಸಾರ್ವಜನಿಕರು ಪಬ್ಲಿಕ್ ನೆಕ್ಸ್ಟ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.
Kshetra Samachara
04/01/2022 11:58 am