ಧಾರವಾಡ: ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಧಾರವಾಡದ ಟಾಟಾ ಮಾರ್ಕೊಪೊಲೊ ಕಂಪೆನಿ ಉದ್ಯೋಗಿಗಳು ಪ್ರತಿಭಟನೆ ನಡೆಸುತ್ತಲೇ ಇರುತ್ತಾರೆ. ಇದೀಗ ಈ ಕಂಪೆನಿಯ ನೌಕರಸ್ಥರು ಮತ್ತೆ ಹೋರಾಟಕ್ಕೆ ಮುಂದಾಗಿದ್ದಾರೆ.
ಹೀಗೆ ಕೈಯಲ್ಲಿ ಮನವಿ ಪತ್ರಗಳನ್ನು ಹಿಡಿದು ನಿಂತಿರುವ ಇವರೆಲ್ಲ ಟಾಟಾ ಮಾರ್ಕೊಪೊಲೊ ಕಂಪೆನಿ ಉದ್ಯೋಗಿಗಳು. ಕಂಪೆನಿಯಲ್ಲೇ ಕ್ರಾಂತಿಕಾರಿ ಕಾರ್ಮಿಕ ಸಂಘಟನೆಯನ್ನು ಕಟ್ಟಿಕೊಂಡು ತಮ್ಮ ಹಕ್ಕಿಗಾಗಿ ಹೋರಾಟ ನಡೆಸುತ್ತಲೇ ಇದ್ದಾರೆ.
ಇದೀಗ ಹೊಸ ವೇತನ ಒಪ್ಪಂದದ ಮೂಲಕ ವೇತನ ಹಾಗೂ ಸಾಮಾಹಿಕ ಸೌಲಭ್ಯ ಭತ್ಯೆಗಳನ್ನು ಹೆಚ್ಚುಸುವಂತೆ ಆಗ್ರಹಿಸಿ ಹೋರಾಟಕ್ಕೆ ಮುಂದಾಗಿದ್ದಾರೆ.
ಜ.10 ರಂದು ಕಂಪೆನಿಯ ನೀತಿಗಳನ್ನು ಖಂಡಿಸಿ ಧರಣಿ ನಡೆಸಲಾಗುವುದು. ಈ ಪ್ರತಿಭಟನೆಯಲ್ಲಿ ಕೇವಲ ಉದ್ಯೋಗಿಗಳಷ್ಟೇ ಅಲ್ಲದೇ ಅವರ ಕುಟುಂಬ ಸದಸ್ಯರು ಕೂಡ ಪಾಲ್ಗೊಳ್ಳಲಿದ್ದಾರೆ
Kshetra Samachara
03/01/2022 05:35 pm