ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಾಂಗ್ರೆಸ್ ಪಾದಯಾತ್ರೆ ಶೆಟ್ಟರ್ ಕಿಡಿ : ಇಷ್ಟುದಿನ ಮಲಗಿದ್ರಾ?

ಹುಬ್ಬಳ್ಳಿ: ಚುನಾವಣೆ ಬರ್ತಿದೆ ಎಂದು ಕಾಂಗ್ರೆಸ್ ರಾಜಕಾರಣ ಆರಂಭಿಸಿದೆ. ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಈ ಹಿಂದೆ ಸರಕಾರ ನಡೆಸಿದವರು, ಈಗ ಮೇಕೆದಾಟು ವಿಚಾರ ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೇಕೆದಾಟು ವಿಚಾರದಲ್ಲಿ ಕಾನೂನು ತೊಡಕುಗಳು ಇರುವುದರಿಂದ ವಿಳಂಬವಾಗಿದೆ. ಈ ವಿಚಾರವಾಗಿ ಎಲ್ಲರು ಒಂದು ಕಡೆ ಕುಳಿತು ಚರ್ಚೆ ಮಾಡಬೇಕು. ಎಲ್ಲರೂ ಸೇರಿ ಸರ್ವಸಮ್ಮತವಾದ ನಿರ್ಣಯ ಕೈಗೊಳ್ಳಬೇಕು ಅಂದಾಗ ಮಾತ್ರ ಸಮಸ್ಯೆ ಇತ್ಯರ್ಥವಾಗುತ್ತದೆ. ಅದರಲ್ಲಿಯೂ ತಮಿಳನಾಡು ವಿರುದ್ಧದ ಹೋರಾಟ ಮಾಡಿ ಜಾರಿಗೆ ತರಬೇಕು ಅಂದರೆ ಎಲ್ಲ ಪಕ್ಷಗಳ ಸಹಕಾರ ಅತ್ಯಗತ್ಯ. ಇದನ್ನು ರಾಜಕಾಕರಣ ಮಾಡಿದರೆ ಇದರ ಲಾಭವನ್ನು ಬೇರೆ ರಾಜ್ಯಗಳು ಪಡೆಯುತ್ತವೆ ಎಂದರು.

ಮೇಕೆದಾಟು ಯೋಜನೆ ಕರ್ನಾಟಕದ ಹಕ್ಕು ಈ ಅಭಿಪ್ರಾಯಕ್ಕೆ ಎಲ್ಲ ಪಕ್ಷಗಳೂ ಬದ್ಧವಾಗಿವೆ. ಕಾನೂನು ತೊಡಕನ್ನು ನಿವಾರಿಸಿ ಇದನ್ನು ಅನುಷ್ಠಾನಕ್ಕೆ ಪ್ರಯತ್ನಿಸಬೇಕೇ ಹೊರತು ರಾಜಕೀಯ ಮಾಡುವುದು ಬೇಡ. ತಮ್ಮ ಸರ್ಕಾರವಿದ್ದಾಗ ಡಿ ಪಿ ಆರ್ ಮಾಡಿರೋದಾಗಿ ಕಾಂಗ್ರೆಸ್ ನವರು ಹೇಳ್ತಾರೆ. ಹಾಗಿದ್ರೆ ಆಗಲೇ ಏಕೆ ಯೋಜನೆ ಜಾರಿಗೆ ತರಲಿಲ್ಲ. ಅವತ್ತು ಡಿ ಪಿ ಆರ್ ಗೆ ಅಪ್ರೂವಲ್ ಸಿಗದಿದ್ದರೆ ಅಂದೇ ಏಕೆ ಪಾದಯಾತ್ರೆ ಮಾಡಲಿಲ್ಲ ವಿರೋಧ ಪಕ್ಷದಲ್ಲಿದ್ದಾಗ ಒಂದು ನಡವಳಿಕೆ, ಆಡಳಿತ ಪಕ್ಷದಲ್ಲಿದ್ದಾಗ ಮತ್ತೊಂದು ನಡವಳಿಕೆ ಸರಿಯಲ್ಲ ಎಂದರು. ಇನ್ನೂ ಕಾಂಗ್ರೆಸ್ ಪಾದಯಾತ್ರೆ ನಾಟಕ, ರಾಜಕೀಯ ಮಾಡೋದನ್ನು ನಿಲ್ಲಿಸಲಿ. ಚುನಾವಣೆ ಹತ್ತಿರ ಇದ್ದಾಗ ಈ ರೀತಿ ಮಾಡುತ್ತಿದ್ದಾರೆ ಯಾಕೆ ಇಷ್ಟು ದಿನ ಮಲಗಿದ್ದರಾ ಇವರು..? ಎಂದು ಲೇವಡಿ ಮಾಡಿದರು.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

03/01/2022 01:47 pm

Cinque Terre

73.26 K

Cinque Terre

8

ಸಂಬಂಧಿತ ಸುದ್ದಿ