ಕಲಘಟಗಿ: ಕರ್ನಾಟಕ ಸಂಗ್ರಾಮ ಸೇನಾ ಕಲಘಟಗಿ ಶಾಖಾ ವತಿಯಿಂದ,ಪಟ್ಟಣದ ಆಂಜನೇಯ ವೃತ್ತದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ,ಮಹಾರಾಷ್ಟ್ರ ಲಾರಿಗೆ ಕನ್ನಡ ಬಾವುಟ ಕಟ್ಟಿ ಪ್ರತಿಭಟನೆ ನಡೆಸಿದರು.
ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಭಗ್ನಗೊಳಿಸಿದಲ್ಲದೇ ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟವನ್ನ ಸುಟ್ಟು ಹಾಕಿದನ್ನ ಖಂಡಿಸಿ ತಾಲೂಕು ಕರ್ನಾಟಕ ಸಂಗ್ರಾಮ ಸೇನೆ ಪ್ರತಿಭಟನೆ ನಡೆಸಿದೆ.
ಪ್ರತಿಭಟನೆಯಲ್ಲಿ ಮಾತನಾಡಿದ ಸಂಗ್ರಾಮ ಸೇನೆ ತಾಲೂಕು ಅಧ್ಯಕ್ಷ ಸಾತಪ್ಪ ಕುಂಕೂರು ದೇಶದಾದ್ಯಂತ ಎಂಇಎಸ್ ಸಂಘಟನೆಯನ್ನ ನಿಷೇಧಿಸಬೇಕು ಹಾಗೂ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳ ವಿರುದ್ದ ದೇಶದ್ರೋಹ ಕಾನೂನು ಜಾರಿಗೊಳಿಸಬೇಕು.ಅಲ್ಲದೇ ಕರ್ನಾಟಕದಲ್ಲಿನ ಮರಾಠಿ ಅಂಗಡಿಗಳ ನಾಮಫಲಕವನ್ನ ತೆಗೆದುಹಾಕಬೇಕು ಎಂದು ಒತ್ತಾಯಿಸಿದರು. ನಂತರ ತಹಶೀಲ್ದಾರರ ಮೂಲಕ ಪ್ರಧಾನ ಮಂತ್ರಿಯವರಿಗೆ ಮನವಿ ಸಲ್ಲಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
01/01/2022 12:12 pm