ಕುಂದಗೋಳ : ಸಾರ್ವತ್ರಿಕ ಗ್ರಾಮ ಪಂಚಾಯಿತಿ ಚುನಾವಣೆ ಪಶುಪತಿಹಾಳ ಹಾಗೂ ಮಳಲಿ ಗ್ರಾಮ ಪಂಚಾಯಿತಿ ಹಾಗೂ ಅಕಾಲಿಕವಾಗಿ ತೆರವಾದ ಯಲಿವಾಳ, ಸಂಕ್ಲೀಪೂರ ಗ್ರಾಮ ಪಂಚಾಯಿತಿ ಮತ ಎಣಿಕೆ ಕಾರ್ಯ ಬೆಳಿಗ್ಗೆ 8 ಗಂಟೆಯಿಂದಲೇ ಆರಂಭವಾಗಿದೆ.
ಗ್ರಾಪಂ ಮತ ಎಣಿಕೆ ಹಿನ್ನಲೆಯಲ್ಲಿ ಆಯಾ ಗ್ರಾಮದ ಅಭ್ಯರ್ಥಿಗಳ ಬೆಂಬಲಿಗರು ತಹಶೀಲ್ದಾರ ಕಚೇರಿ ಎದುರು ತಂಡೋಪ ತಂಡದಲ್ಲಿ ಧಾವಿಸಿ ಮತ ಎಣಿಕೆಯ ಫಲಿತಾಂಶವನ್ನು ನಿರೀಕ್ಷೆ ಮಾಡುತ್ತಿದ್ದಾರೆ.
9 ಜನ ಚುನಾವಣೆ ಸಿಬ್ಬಂದಿಗಳು ಮತ ಎಣಿಕೆ ಕಾರ್ಯ ಕೈಗೊಂಡಿದ್ದು ಮೊದಲ ಸುತ್ತಿನಲ್ಲಿ ಮಳಲಿ ಗ್ರಾಮ ಪಂಚಾಯಿತಿಯ ಮತ ಎಣಿಕೆ ಕಾರ್ಯ ಆರಂಭವಾಗಿದೆ, ಸಮಯ 12 ಸಮೀಪಿಸುತ್ತಿದ್ದರೂ ಇನ್ನೂ ಒಂದು ವಾರ್ಡ್ ಫಲಿತಾಂಶ ಹೊರ ಬಿದ್ದಿಲ್ಲಾ.
ಮತ ಎಣಿಕೆ ಕಾರ್ಯದ ಹಿನ್ನಲೆಯಲ್ಲಿ ತಹಶೀಲ್ದಾರ ಕಚೇರಿ ಆವರಣದ ಸುತ್ತ ಒಂದು ಪೊಲೀಸ್ ಡಿಆರ್ ವಾಹನ ಹಾಗೂ ಸಿಪಿಐ ಎಮ್.ಎನ್.ದೇಶನೂರು ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು ಮತ ಎಣಿಕೆ ಕೇಂದ್ರದ ಸುತ್ತ ಸಾರ್ವಜನಿಕರು ಅಭ್ಯರ್ಥಿಗಳ ಬೆಂಬಲಿಗರ ಪ್ರವೇಶ ನಿಷೇಧ ಹೇರಲಾಗಿದೆ.
Kshetra Samachara
30/12/2021 12:03 pm