ಧಾರವಾಡ: ಧಾರವಾಡ ತಾಲೂಕಿನ ಮಾರಡಗಿ ಗ್ರಾಮ ಪಂಚಾಯ್ತಿಗೆ ಇಂದು ಬೆಳಿಗ್ಗೆಯಿಂದ ತುರುಸಿನ ಮತದಾನ ನಡೆಯುತ್ತಿದೆ.
ನಿಗದಿ ಗ್ರಾಮದ ಒಂದನೇ ವಾರ್ಡಿನಲ್ಲಿ ತೆರವಾದ ಸ್ಥಾನಕ್ಕೆ ಇಂದು ಉಪಚುನಾವಣೆ ನಡೆಯುತ್ತಿದೆ. ಈ ಕ್ಷೇತ್ರಕ್ಕೆ ನಾಲ್ಕು ಜನ ಅಭ್ಯರ್ಥಿಗಳು ಪೈಪೋಟಿ ನಡೆಸಿದ್ದಾರೆ.
ಇನ್ನು ಧಾರವಾಡ ತಾಲೂಕಿನ ಮಾರಡಗಿ ಗ್ರಾಮದ ಗ್ರಾಮ ಪಂಚಾಯ್ತಿ ಚುನಾವಣೆ ಹಲವು ಕಾರಣಗಳಿಂದ ಮುಂದೂಡಲ್ಪಟ್ಟಿತ್ತು. ಇಲ್ಲಿ 17 ಜನರ ಸದಸ್ಯರ ಬಲಾಬಲವಿದ್ದು, ಒಟ್ಟು 60 ಜನ ಕಣದಲ್ಲಿದ್ದಾರೆ.
ಮಾರಡಗಿ ಗ್ರಾಮ ಪಂಚಾಯ್ತಿಗೆ ಬೆಳಿಗ್ಗೆಯಿಂದ ಮತದಾನ ಆರಂಭವಾಗಿದ್ದು, ಗ್ರಾಮಸ್ಥರು ಉತ್ಸಾಹದಿಂದ ಮತದಾನ ಮಾಡಲು ಬರುತ್ತಿದ್ದಾರೆ.
Kshetra Samachara
27/12/2021 01:29 pm