ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ : ಮತಯಾಚನೆಗೆ ಸಚಿವರ ಪಾದಯಾತ್ರೆ

ಅಣ್ಣಿಗೇರಿ : ಡಿಸೆಂಬರ್ 27ರಂದು ಅಣ್ಣಿಗೇರಿ ಪಟ್ಟಣದ ಪುರಸಭೆಯ ಚುನಾವಣೆಯ ನಿಮಿತ್ತ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪರ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಶಂಕರ್ ಪಾಟೀಲ್ ಮುನೇನಕೊಪ್ಪನವರು ಪಟ್ಟಣದ 1,2,3,4 ವಾರ್ಡಿನಲ್ಲಿ ಪಾದಯಾತ್ರೆಯ ಮಾಡುವ ಮೂಲಕ ಮತದಾರರಲ್ಲಿ ಮತಯಾಚನೆ ಮಾಡಿದರು.

ಮತ ಕೇಳುವ ಸಮಯದಲ್ಲಿ ವಾರ್ಡಿನ ಗುರುಹಿರಿಯರು, ಮತದಾರರು ವಾರ್ಡ್ನಲ್ಲಿನ ಸಮಸ್ಯೆಗಳ ಬಗ್ಗೆ ಸವಿಸ್ತಾರವಾಗಿ ಸಚಿವರ ಮುಂದೆ ಹೇಳಿಕೊಂಡರು. ಈ ಸಲ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ತಂದರೆ, ಅಭ್ಯರ್ಥಿಗಳು ನಿಮ್ಮ ವಾರ್ಡಿನ ಸಮಗ್ರ ಅಭಿವೃದ್ಧಿಯನ್ನು ಮಾಡುತ್ತಾರೆ. ಎಷ್ಟೇ ಅನಾನುಕೂಲತೆಗಳು ಈ ವಾರ್ಡಿನಲ್ಲಿ ಇದ್ದರೂ ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾರೆ. ಪಕ್ಷ ಒಳ್ಳೆಯ ಅಭ್ಯರ್ಥಿಗಳನ್ನು ಗುರುತಿಸಿ ಟಿಕೆಟ್ ನೀಡಿದ್ದು, ಬರುವ ದಿನಗಳಲ್ಲಿ ಅಣ್ಣಿಗೇರಿ ನಗರದಲ್ಲೆಲ್ಲಾ 24/7 ಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತದೆ. ಪಟ್ಟಣದ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲಾಗುತ್ತದೆ. ಹೀಗೆ ಹಲವಾರು ಯೋಜನೆಗಳನ್ನು ಪಟ್ಟಣದಲ್ಲಿ ಹಾಕಿಕೊಂಡಿದ್ದೆವೆ. ಅಭ್ಯರ್ಥಿಗಳನ್ನು ಗೆಲ್ಲಿಸುವ ಸಲುವಾಗಿ ನೀವು ಮತ ನೀಡಬೇಕಾಗಿರುತ್ತದೆ ಎಂದು ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಬಸವರಾಜ ಕುಂದಗೋಳ ಮಠ, ಷಣ್ಮುಖ ಗುರಿಕಾರ್, ದಾನಪ್ಪ ಗೌಡರ್, ಶಿವಾನಂದ ಹೊಸಳ್ಳಿ ಸೇರಿದಂತೆ ವಾರ್ಡಿನ ಅಭ್ಯರ್ಥಿಗಳು ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

24/12/2021 06:28 pm

Cinque Terre

19.98 K

Cinque Terre

1

ಸಂಬಂಧಿತ ಸುದ್ದಿ