ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ ಚುನಾವಣೆ : ಕೋನರಡ್ಡಿ ಪಕ್ಷಾಂತರದ ಲಾಭ ಯಾರಿಗೆ...ನಷ್ಟ ಯಾರಿಗೆ ?

ಪಬ್ಲಿಕ್ ನೆಕ್ಸ್ಟ್ ವರದಿ : ಬಿ. ನಂದೀಶ್

ಅಣ್ಣಿಗೇರಿ : ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿರುವ ನವಲಗುಂದ ಮಾಜಿ ಶಾಸಕ ಎನ್.ಎಚ್ ಕೋನರಡ್ಡಿಗೆ ಇಲ್ಲಿಯ ಪುರಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿ ವಹಿಸಲಾಗಿದೆ.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನವಲಗುಂದ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಕೋನರಡ್ಡಿಗೆ ಇದೊಂದು ಸವಾಲು ಎಂದೇ ಹೇಳಬಹುದು.

ಇದೇ ಹಿನ್ನಲೆಯಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿಗಳ ಪರ ಭರ್ಜರಿಯಾಗಿಯೇ ಮತಯಾಚನೆ ಮಾಡುತ್ತಿದ್ದಾರೆ. ಆದರೆ ಜೆಡಿಎಸ್ ಮತದಾರರು ಹಾಗೂ ಸ್ಥಳೀಯ ನಾಯಕರು ಮಾನಸಿಕವಾಗಿ ಕೋನರಡ್ಡಿ ಅವರು ಇನ್ನು ಮಾಜಿ ಕುಮರಸ್ವಾಮಿ ಬೆಂಬಲಿಗರೇ ಎಂದು ಭಾವಿಸಿದಂತೆ. ಅವರನ್ನು ಕಾಂಗ್ರೆಸ್ ಮುಖಂಡ ಎಂದು ಒಪ್ಪಿದಂತಿಲ್ಲ. ಹೀಗಾಗಿ ಕೋನರಡ್ಡಿ ಜೆಡಿಎಸ್ ಪರವಾಗಿಯೇ ಪ್ರಚಾರ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಹಿಗಾಗಿ ಒಟ್ಟಾರೆ ಅಣ್ಣಿಗೇರಿ ಪುರಸಭೆ ಚುನಾವಣೆಯಲ್ಲಿ ಒಟ್ಟಾರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಠಿಯಾಗಿದೆ.

ಕಳೆದ ಬಾರಿ ಜೆಡಿಎಸ್ ಸಹಕಾರದೊಂದಿಗೆ ಅಧಿಕಾರ ಚಲಾಯಿಸಿದ ಬಿಜೆಪಿಗೂ ದೊಡ್ಡ ಸವಾಲಾಗಿದೆ. ಶತಾಯಗತಾಯ ಈ ಬಾರಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲೇಕಾಗಿದೆ. ಇದೇ ಕಾರಣಕ್ಕೆ ಬಿಜೆಪಿ ಮುಖಂಡರು ಜಿದ್ದಿಗೆ ಬಿದ್ದಂತೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಪಕ್ಷದ ಪ್ರಣಾಳಿಕೆ ಮೂಲಕ ಮತದಾರರ ಮನವೊಲಿಸುವ ಪ್ರಯತ್ನ ನಡೆದಿದೆ.

ಒಟ್ಟಾರೆಯಾಗಿ ಡಿಸೆಂಬರ್ 27 ಮತದಾನಕ್ಕೆ ಸಕಲ ಸಿದ್ಧತೆ ಭರದಿಂದ ನಡೆದಿದ್ದು, ಮತದಾರ ಪ್ರಭುಗಳು ಯಾವ ಪಕ್ಷಕ್ಕೆ ಜೈ ಎನ್ನುವರೋ ಕಾದುನೋಡಬೇಕಾಗಿದೆ.

Edited By :
Kshetra Samachara

Kshetra Samachara

24/12/2021 09:49 am

Cinque Terre

9.41 K

Cinque Terre

0

ಸಂಬಂಧಿತ ಸುದ್ದಿ