ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮಹಾತ್ಮರ, ದಾರ್ಶನಿಕರ ಪ್ರತಿಮೆಗಳಿಗೆ ರಕ್ಷಣೆ ಒದಗಿಸಿ

ಧಾರವಾಡ: ಎಂಇಎಸ್ ಹಾಗೂ ಶಿವಸೇನೆ ಕಾರ್ಯಕರ್ತರು ಮಹಾತ್ಮರ ಮತ್ತು ದಾರ್ಶನಿಕರ ಪ್ರತಿಮೆಗಳಿಗೆ ಅಪಮಾನ ಮಾಡುವ ಕೆಲಸ ಮಾಡುತ್ತಿದ್ದು, ಸರ್ಕಾರಗಳು ಆ ಪ್ರತಿಮೆಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಅಖಿಲ ಭಾರತ ವೀರಶೈವ ಮಹಾಸಭಾ ಸದಸ್ಯರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಬೆಳಗಾವಿಯಲ್ಲಿ ಎಂಇಎಸ್ ಪುಂಡರು ಸಂಗೊಳ್ಳಿ ರಾಯಣ್ಣ ಹಾಗೂ ಜಗತ್ತಿಗೆ ಮೊದಲ ಅನುಭವ ಮಂಟಪ ಒದಗಿಸಿಕೊಟ್ಟ ದಲಿತೋದ್ಧಾರಕ ಮಹಾತ್ಮ ಬಸವಣ್ಣನವರ ಮೂರ್ತಿಗೆ ಅಪಮಾನ ಮಾಡುವ ಕೆಲಸ ಮಾಡಿದ್ದಾರೆ. ಕೂಡಲೇ ಆ ಪುಂಡರನ್ನು ಬಂಧಿಸಿ, ಮಹಾತ್ಮರ ಹಾಗೂ ದಾರ್ಶನಿಕರ ಪ್ರತಿಮೆಗಳಿಗೆ ಸೂಕ್ತ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದರು.

Edited By : Nagesh Gaonkar
Kshetra Samachara

Kshetra Samachara

23/12/2021 02:38 pm

Cinque Terre

61.17 K

Cinque Terre

3

ಸಂಬಂಧಿತ ಸುದ್ದಿ