ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಾಯ್ದೆಗಳು ಕೇವಲ ಪೆಪರ್ ನಲ್ಲಿ ಮಾತ್ರ ಉಳಿಯಬಾರದು ಜಾರಿಯಾಗಬೇಕು- ಮುತಾಲಿಕ್

ಹುಬ್ಬಳ್ಳಿ- ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುತ್ತಿರೋದು, ಶ್ರೀರಾಮ ಸೇನೆ ಸರಕಾರದ ನಿರ್ಧಾರವನ್ನ ಸ್ವಾಗತ ಮಾಡುತ್ತದೆ,

ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಗೋಹತ್ಯೆ ನಿಷೇದ ಕಾಯ್ದೆ, ಮತಾಂತರ ನಿಷೇಧ ಕಾಯ್ದೆಗಳಿಗೆ

ಟಾಸ್ಕ್ ಪೋಸ್೯ ತಂಡ ರಚನೆ ಮಾಡಿದೆ. ಸಧ್ಯ ಹತ್ತು ಜನರು ಈ ತಂಡದಲ್ಲಿದ್ದಾರೆ. ಗೋಹತ್ಯೆ ನಿಷೇದ ಕಾಯ್ದೆ ಬಂದರು, ಗೋಹತ್ಯೆ ನಡೆಯುತ್ತಿದೆ, ಕಾಯ್ದೆಗಳು ಕೇವಲ ಪೆಪರ್ ನಲ್ಲಿ ಮಾತ್ರ ಉಳಿಯಬಾರದು ಜಾರಿಗೆ ತರಬೇಕು, ಇದೆ ಕಾರಣಕ್ಕೆ ಟಾಸ್ಕ್ ಫೋರ್ಸ್ ತಂಡ ರಚನೆ ಮಾಡಿದೆ ಎಂದರು.

ಮತಾಂತರ ತಡೆಯಲು ಪೊಲೀಸರಿಗೆ ಅನುಕೂಲವಾಗುವಂತೆ ಈ ತಂಡ ರಚನೆ ಮಾಡಿದ್ದೆವೆ. ಕಾನೂನು ಕೈಗೆತ್ತಿಕೊಳ್ಳದೆ ಈ ತಂಡ ಕೆಲಸ ಮಾಡುತ್ತದೆ, ಹೊಸ ವರ್ಷ ಆಚರಣೆಯನ್ನ ಶ್ರೀರಾಮ ಸೇನೆ ಖಂಡಿಸುತ್ತದೆ, ಈ ಕೆಟ್ಟ ಪದ್ಧತಿಯನ್ನ ವಿರೋಧಿಸುತ್ತಿದ್ದೇವೆ, ಯುಗಾದಿ ಹಿಂದೂಗಳಿಗೆ ಹೊಸವರ್ಷ, ಇಸ್ಕಾನ್, ಧರ್ಮಸ್ಥಳ ಮತ್ತು ರವಿಶಂಕರ ಗುರೂಜಿಯವರು ಹೊಸ ವರ್ಷ ಆಚರಣೆ ಮಾಡುತ್ತಾರೆ, ಹೊಸ ವರ್ಷಾಚರಣೆ ಮಾಡದಂತೆ ಎಲ್ಲರಿಗೂ ಪತ್ರ ಬರೆದಿದ್ದೇನೆ, ಒಂದು ವೇಳೆ ಹೊಸ ವರ್ಷಾಚರಣೆ ಮಾಡಿದ್ರೆ ಧರಣಿ ಮಾಡುತ್ತೆವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಹಿಂದುತ್ವದ ಆಧ್ಯಾತ್ಮೀಕ ಕೇಂದ್ರದಲ್ಲಿ ಹೊಸ ವರ್ಷಾಚರಣೆ ಸರಿಯಲ್ಲ, ಈ ಕಾಯ್ದೆ ತಂದಿರೋದು ಹಿಂದುಗಳಿಗೆ ಕಣ್ಣೋರೆಸುವ ತಂತ್ರ ಇದು, ಮುಖ್ಯಮಂತ್ರಿಗಳ‌ ಕ್ಷೇತ್ರದಲ್ಲಿ ಸಾಕಷ್ಟು ಕಸಾಯಿಖಾನೆಗಳಿವೆ, ಗೋ ಹತ್ಯೆ ನಿಷೇಧ ಕಾಯ್ದೆಯೂ ಸಹ ಸರಿಯಾಗಿ ಆಗಿಲ್ಲ, ಇದು ಸಹ ಅದೇ ರೀತಿಯಾಗಬಾರದೆಂದು ತಿಳಿಸಿದರು.

Edited By : Nagesh Gaonkar
Kshetra Samachara

Kshetra Samachara

23/12/2021 01:33 pm

Cinque Terre

25.14 K

Cinque Terre

3

ಸಂಬಂಧಿತ ಸುದ್ದಿ