ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ ಚುನಾವಣೆ : ಕಣದಲ್ಲಿ 74 ಅಭ್ಯರ್ಥಿಗಳು : ಕಾಂಗ್ರೆಸ್‌, ಬಿಜೆಪಿಗೆ 16 ಪಕ್ಷೇತರರ ಅಡ್ಡಗಾಲು

ವರದಿ : ಬಿ. ನಂದೀಶ್

ಅಣ್ಣಿಗೇರಿ : ಪಟ್ಟಣದ ಪುರಸಭೆ ಚುನಾವಣೆಗೆ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದ ಒಟ್ಟು 84 ಅಭ್ಯರ್ಥಿಗಳಲ್ಲಿ 10 ಜನ ಇಂದು ನಾಮಪತ್ರ ಹಿಂತೆಗೆದುಕೊಂಡಿದ್ದು ಇದರಿಂದ ಅಂತಿಮವಾಗಿ ಕಣದಲ್ಲಿ 74 ಅಭ್ಯರ್ಥಿಗಳು ಉಳಿದಂತಾಗಿದೆ.

ಬಿಜೆಪಿ ಹಾಗೂ ಕಾಂಗ್ರೆಸ್ಸಿನ ಅಧಿಕೃತ ತಲಾ 23 ಅಭ್ಯಥಿಗಳು, ಜೆಡಿಎಸ್ ನ 11 ಹಾಗೂ ಆಮ್ ಆದ್ಮಿಯಿಂದ ಓರ್ವ ಅಭ್ಯರ್ಥಿ ಕಣದಲ್ಲಿ ಉಳಿದಿದ್ದಾರೆ. ಇನ್ನುಳಿದಂತೆ 16 ಜನ ಪಕ್ಷೇತರರಾಗಿದ್ದಾರೆ.

ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಮುಖಂಡರು ಬಂಡಾಯ ಅಭ್ಯರ್ಥಿಗಳ ಮನವೊಲಿಸಲು ಯಶಸ್ವಿಯಾಗಿದ್ದರೂ ಕಣದಲ್ಲಿರುವ 16 ಜನ ಪಕ್ಷೇತರರು ಯಾರ ಗೆಲುವಿಗೆ ಅಡ್ಡಗಾಲಾಗುತ್ತಾರೆ ನೋಡಬೇಕು. ಆದರೆ ಕೆಲ ಅಭ್ಯರ್ಥಿಗಳು ಯಾರು ಮಾತಿಗೂ ಬಗ್ಗದೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರಗಳನ್ನು ಹಿಂತೆಗೆದುಕೊಳ್ಳದೆ ಚುನಾವಣೆಗೆ ಸಿದ್ದರಾಗಿರುವುದು ನೋಡಿದರೆ ಈ ಬಾರಿಯ ಚುನಾವಣೆ ತುರಸಿನದಾಗಲಿದೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ. ಡಿಸೆಂಬರ್ 27 ರಂದು ಮತದಾನವಿದ್ದು 30ಕ್ಕೆ ಮತ್ತ ಎಣಿಕೆ ನಡೆಯಲಿದೆ.

Edited By : Nagesh Gaonkar
Kshetra Samachara

Kshetra Samachara

18/12/2021 08:00 pm

Cinque Terre

76.77 K

Cinque Terre

1

ಸಂಬಂಧಿತ ಸುದ್ದಿ