ವರದಿ : ಬಿ. ನಂದೀಶ್
ಅಣ್ಣಿಗೇರಿ : ಇಲ್ಲಿಯ ಪುರಸಭೆ ಚುನಾವಣೆ ಕ್ಲೈಮೆಕ್ಸ್ ಹಂತ ತಲುಪಿದ್ದು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಟಿಕೆಟ್ ಸಿಗದೆ ನಿರಾಶೆಗೊಂಡಿರುವ ಆಕಾಂಕ್ಷಿಗಳು ಬಂಡಾಯದ ಬಾವುಟ ಬೀಸಲು ಸಜ್ಜಾಗಿದ್ದಾರೆ.
ತಮಗೆ ಟಿಕೆಟ್ ಸಿಗದೆ ಬಂಡಾಯದ ಕಹಳೆ ಊದಲಿರುವ ಆಕಾಂಕ್ಷಿಗಳ ಮನವೊಲಿಸಲು ಬಿಜೆಪಿ ಹಾಗೂ ಕಾಂಗ್ರೆಸ್ ಮುಖಮಡರು ಹರಸಾಹಸ ಪಡುತ್ತಿದ್ದಾರೆ. ಸ್ಥಳೀಯ ಮುಖಂಡರು ಬಂಡಾಯ ಅಭ್ಯರ್ಥಿಗಳಿಗೆ ಕರಿಸಿ ಮನವೊಲಿಸುವ ಪ್ರಯತ್ನ ಮುಂದುವರಿಸಿದ್ದಾರೆ. ಕೆಲವು ಅಭ್ಯರ್ಥಿಗಳ ಮನವೊಲಿಸುವಲ್ಲಿ ಮುಖಂಡರು ಯಶಸ್ವಿಯಾಗಿದ್ದರೂ ಇನ್ನು ಕೆಲವರು ಯಾರ ಮಾತಿಗೂ ಬಗ್ಗದೆ ಪಟ್ಟು ಹಿಡಿದಿರುವುದು ಮುಖಂಡರಿಗೆ ಕಗ್ಗಂಟಾಗಿದೆ.
ಪಟ್ಟಣದ ಪುರಸಭೆ ಚುನಾವಣೆಗೆ ಸ್ಪರ್ಧೆ ಬಯಸಿ 113 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಅದರಲ್ಲಿ 84 ನಾಮಪತ್ರಗಳು ಸ್ವೀಕೃತಗೊಂಡರೆ 29 ನಾಮಪತ್ರಗಳು ತಿರಸ್ಕೃತವಾಗಿವೆ. ಶನಿವಾರ ಡಿಸೆಂಬರ್ 18 ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದ್ದು, ಅಂತಿಮವಾಗಿ ಯಾರು ಯಾರು ಕಣದಲ್ಲಿ ಉಳಿಯುತ್ತಾರೆ ಎಂಬುದು ಸ್ಪಷ್ಟವಾಗಲಿದೆ.
Kshetra Samachara
18/12/2021 09:43 am