ಅಣ್ಣಿಗೇರಿ: ಪಟ್ಟಣದ ಪುರಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಡಿಸೆಂಬರ್ 15 ರಂದು 113 ನಾಮಪತ್ರಗಳು ಸಲ್ಲಿಕೆಯಾಗಿದ್ದವು, ಡಿಸೆಂಬರ 16 ರಂದು 84 ನಾಮಪತ್ರಗಳು ಸ್ವೀಕೃತವಾಗಿದ್ದು 29 ನಾಮಪತ್ರಗಳು ತಿರಸ್ಕರಿಸಲಾಗಿದೆ. ಇಂದು ಶನಿವಾರ ಡಿಸೆಂಬರ್ 18 ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನ ವಾಗಿರುವುದರಿಂದ ಯಾವ ಯಾವ ಅಭ್ಯರ್ಥಿಗಳು
ಹಿಂತೆಗೆದುಕೊಳ್ಳುತ್ತಾರೆ ಎಂದು ಕಾದುನೋಡಬೇಕಾಗಿದೆ.
ರಾಷ್ಟ್ರೀಯ ಪಕ್ಷಗಳ ಟಿಕೆಟ್ ನೀಡುತ್ತಾರೆ ಎಂಬ ನಂಬಿಕೆಯಲ್ಲಿದ್ದ ಕೆಲವು ಅಭ್ಯರ್ಥಿಗಳು ಕಾದುನೋಡಿ ಕೊನೆಗೆ ಬಿ ಫಾರ್ಮ್ ಸಿಗದಿದ್ದಾಗ ಅಭ್ಯರ್ಥಿಗಳು ಪಕ್ಷದ ಹೊರಗಡೆ ಬಂದು ಬಂಡಾಯದ ಕಹಳೆ ಓದಿರುತ್ತಾರೆ. ಈಗಾಗಲೇ ರಾಷ್ಟ್ರೀಯ ಪಕ್ಷದ ಸ್ಥಳೀಯ ಮುಖಂಡರು ಬಂಡಾಯ ಅಭ್ಯರ್ಥಿಗಳಿಗೆ ಕರಿಸಿ ಮಾತನಾಡುತ್ತಾರೆ ಎಂದು ತಿಳಿದಿರುತ್ತದೆ. ಕೆಲವೊಂದಿಷ್ಟು ಅಭ್ಯರ್ಥಿಗಳು ಮನವೊಲಿಸಲು ಸ್ಥಳೀಯ ಮುಖಂಡರು ಗೆದ್ದಿರುತ್ತಾರೆ.ಆದರೆ ಕೆಲವು ಬಂಡಾಯ ಅಭ್ಯರ್ಥಿಗಳು ಎಷ್ಟೇ ಮನವೊಲಿಸಿದರು ಪ್ರಯತ್ನ ಪಟ್ಟರು ಮಾತು ಕೇಳುತ್ತಿಲ್ಲ ಎಂದು ಗೊತ್ತಾಗಿರುತ್ತದೆ. ಒಟ್ಟಾರೆಯಾಗಿ ಸಾಯಂಕಾಲದವರೆಗೆ ಯಾವ ಯಾವ ಅಭ್ಯರ್ಥಿಗಳು ಹಿಂತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡಬೇಕಾಗಿದೆ.
Kshetra Samachara
18/12/2021 09:43 am