ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವ ಪ್ರಕ್ರಿಯೆ ಕೈಬಿಡಿ

ಧಾರವಾಡ: ರಾಜ್ಯದ ಶಾಲೆ, ಅಂಗನವಾಡಿಗಳಲ್ಲಿ ಮಕ್ಕಳಿಗೆ ಮೊಟ್ಟೆ ಬದಲಾಗಿ ಸತ್ವಯುತ ಸರ್ವಸಮ್ಮತ ಸಸ್ಯಾಹಾರ ಪದಾರ್ಥ ನೀಡಬೇಕು ಇಲ್ಲವಾದಲ್ಲಿ ರಾಜ್ಯದಾದ್ಯಂತ ಸಸ್ಯಾಹಾರಿಗಳಿಗಾಗಿ ಪ್ರತ್ಯೇಕ ಶಾಲೆ ಹಾಗೂ ಅಂಗನವಾಡಿಗಳನ್ನು ತೆರೆಯಬೇಕು ಎಂದು ಭಾರತ ಸಸ್ಯಾಹಾರಿಗಳ ಒಕ್ಕೂಟದ ಪ್ರಧಾನ ಸಂಚಾಲಕರಾದ ದಯಾನಂದ ಸ್ವಾಮೀಜಿ ಹೇಳಿದ್ದಾರೆ.

ಧಾರವಾಡದಲ್ಲಿ ಮಾತನಾಡಿರುವ ಅವರು, ಮೂಟ್ಟೆ ಬಗೆದೀತು ನಿಮ್ಮ ಹೂಟ್ಟೆನಾ ಎಂದು ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ನೀಡಿದ್ದೇನೆ. ಸರ್ಕಾರ ಅನುದಾನಿತ ಶಾಲೆ, ಅಂಗನವಾಡಿಗಳಲ್ಲಿನ ಮಕ್ಕಳಿಗೆ ಪೌಷ್ಟಿಕಾಂಶದ ಹೆಸರಿನಲ್ಲಿ ಮೊಟ್ಟೆ ತಿನ್ನಿಸುತ್ತಿರುವುದನ್ನು ಕೈಬಿಟ್ಟು , ಮೊಟ್ಟೆಗಿಂತಲೂ ಅಧಿಕ ಪೋಷಕಾಂಶ ಅಂಶಗಳನ್ನು ಒಳಗೊಂಡ ಸತ್ವಯುತ ಸರ್ವಸಮ್ಮತ ಏಕರೂಪದ ಶುದ್ಧ ಸಸ್ಯಾಹಾರ ಪದಾರ್ಥಗಳನ್ನು ನೀಡಬೇಕ ಎಂದು ಆಗ್ರಹಿಸಿದ್ದಾರೆ.

ಸರ್ಕಾರಿ ಅನುದಾನಿತ ಶಾಲೆ, ಅಂಗನವಾಡಿಗಳನ್ನು ಮೊಟ್ಟೆಯಿಂದ ಮುಕ್ತಗೊಳಿಸಲು ಸಾಧ್ಯವೇ ಇಲ್ಲ ಎನ್ನುವುದಾದಲ್ಲಿ ರಾಜ್ಯದ ಲಿಂಗಾಯತ ಧರ್ಮ, ಜೈನ ಧರ್ಮ ಮುಂತಾದ ಧರ್ಮಗಳ ಮತ್ತು ಬ್ರಾಹ್ಮಣ , ವೈಶ್ಯ ಮುಂತಾದ ಸಮುದಾಯಗಳ, ಸಂಪ್ರದಾಯ, ಸಸ್ಯಾಹಾರ ಪರವಾದ ಸರ್ವ ಜನಾಂಗಗಳ ಲಕ್ಷಾಂತರ ಮಕ್ಕಳಿಗಾಗಿ ಪ್ರತ್ಯೇಕ ಸಸ್ಯಾಹಾರಿ ಶಾಲೆ ಮತ್ತು ಅಂಗನವಾಡಿಗಳನ್ನು ತೆರೆಯುವಂತೆ ಆಗ್ರಹಿಸಿ ಡಿ.20 ರಂದು ಬೆಳಗಾವಿ ವಿಧಾನಸೌಧ ಚಲೋ ಚಳುವಳಿ ಹಮ್ಮಿಕೊಳ್ಳಲಾಗಿದೆ ಎಂದರು.

Edited By : Manjunath H D
Kshetra Samachara

Kshetra Samachara

16/12/2021 02:20 pm

Cinque Terre

24.68 K

Cinque Terre

6

ಸಂಬಂಧಿತ ಸುದ್ದಿ