ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಅಲ್ಪಸಂಖ್ಯಾತ ನಾಯಕನಿಗೆ ಎರಡು ದಶಕಗಳ ಬಳಿಕ ಸಿಕ್ಕ ರಾಜಕೀಯ ಮನ್ನಣೆ

ಧಾರವಾಡ: ಅಖಂಡ ಧಾರವಾಡ ಜಿಲ್ಲೆಯಲ್ಲಿ ಕಳೆದ ಎರಡು ದಶಕಗಳಿಂದ ಅಲ್ಪಸಂಖ್ಯಾತರಿಗೆ ಸಿಗದ ರಾಜಕೀಯ ಮನ್ನಣೆ ಇದೀಗ ಸಲೀಂ ಅಹ್ಮದ್‌ ಅವರ ಮೂಲಕ ಸಿಕ್ಕಿದೆ.

ಅನುಭವಿ ರಾಜಕಾರಣಿ ಹಾಗೂ ಪ್ರಾಮಾಣಿಕ ಕಾರ್ಯಕರ್ತರಿಂದ ಧಾರವಾಡ, ಹಾವೇರಿ, ಗದಗ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹುರಿಯಾಳು ಸಲೀಂ ಅಹ್ಮದ್ ಮೊದಲ ಪ್ರಾಶಸ್ತ್ಯದ ಮತಗಳ ಮೂಲಕ ಗೆದ್ದು ಬಂದಿದ್ದಾರೆ.

ಸದ್ಯ ಹುಬ್ಬಳ್ಳಿ ಪೂರ್ವ ಕ್ಷೇತ್ರವಾಗಿದ್ದ ವಿಧಾನಸಭಾ ಕ್ಷೇತ್ರವನ್ನು ಮೊದಲು ಜಬ್ಬಾರಖಾನ್ ಹೊನ್ನಳ್ಳಿಯವರು ಪ್ರತಿನಿಧಿಸಿದ್ದರು. ಹಾವೇರಿಯ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ನಡೆಸಿದ್ದ ಪ್ರೊ. ಐ.ಜಿ.ಸನದಿಯವರು ಅಲ್ಲಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಇದಾದ ಮೇಲೆ ಅಖಂಡ ಧಾರವಾಡ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರಿಗೆ ಪ್ರಮುಖ ಕ್ಷೇತ್ರದಲ್ಲಿ ರಾಜಕೀಯ ಮನ್ನಣೆ ಸಿಕ್ಕಿರಲಿಲ್ಲ.

ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿರುವ ಸಲೀಂ ಅಹ್ಮದ್ ಅವರು ತಮ್ಮ 57ನೇ ವಯಸ್ಸಿನಲ್ಲೂ ಕಾರ್ಯಕರ್ತರಂತೆ ಪಕ್ಷಕ್ಕಾಗಿ ದುಡಿಯುತ್ತಲೇ ಬಂದಿದ್ದಾರೆ. ಈ ಬಾರಿಯೂ ಕೆಲವು ಅನುಭವಿ ರಾಜಕಾರಣಿಗಳು ಇವರನ್ನು ವಿರೋಧ ಮಾಡಿದ್ದರೂ ಕೂಡ, ಪ್ರಾಮಾಣಿಕ ಕಾರ್ಯಕರ್ತರು ಹಾಗೂ ಸಲೀಂ ಅಹ್ಮದ್‌ರ ರಾಜಕೀಯ ನಡೆ ಅವರ ಗೆಲುವಿಗೆ ಕಾರಣವಾಗಿದೆ.

Edited By : Vijay Kumar
Kshetra Samachara

Kshetra Samachara

14/12/2021 09:59 pm

Cinque Terre

13.82 K

Cinque Terre

2

ಸಂಬಂಧಿತ ಸುದ್ದಿ