ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಮಸ್ಯೆ ಆಲಿಸದಿದ್ದರೂ ಆರಿಸಿ ಬಂದ ನಾಯಕ: ಬಿಜೆಪಿಯ ಪ್ರದೀಪ ಶೆಟ್ಟರ್...!

ಹುಬ್ಬಳ್ಳಿ: ಮತದಾರರ ಸಮಸ್ಯೆಗಳನ್ನು ಆಲಿಸಿ ಗೆದ್ದು ಬರುವುದೇ ಕಷ್ಟ. ಆದರೆ ನಮ್ಮ ಜನಪ್ರತಿನಿಧಿ ಪ್ರದೀಪ್ ಶೆಟ್ಟರ್ ಯಾರೊಬ್ಬರ ಸಮಸ್ಯೆಗಳನ್ನು ಆಲಿಸದೇ ಇದ್ದರೂ ಆರಿಸಿ ಬಂದಿದ್ದಾರೆ. ಇಲ್ಲಿ ವ್ಯಕ್ತಿ ನೋಡಿ ವೋಟ್ ಹಾಕಿದ್ದಾರೋ...? ಅಥವಾ ಪಕ್ಷ ನೋಡಿ ವೋಟ್ ಹಾಕಿದ್ದಾರೋ ಒಂದು ಕೂಡ ಅರ್ಥ ಆಗ್ತಿಲ್ಲ...

ಹೌದು.. ವಿಧಾನ ಪರಿಷತ್ ಚುನಾವಣೆಯಲ್ಲಿ ಧಾರವಾಡ, ಗದಗ ಹಾಗೂ ಹಾವೇರಿ ಕ್ಷೇತ್ರದ ಚುನಾಯಿತ ಪ್ರತಿನಿಧಿಗಳಿಂದ ಮತ ಪಡೆದು ಆರಿಸಿ ಬಂದಿರುವ ಪ್ರದೀಪ ಶೆಟ್ಟರ್ ಹುಬ್ಬಳ್ಳಿಯ ಬೆರಳು ಎಣಿಕೆ ಜನರಿಗೆ ಮಾತ್ರ ಲಭ್ಯವಾಗುತ್ತಾರೆ ವಿನಃ ಗದಗ ಹಾಗೂ ಹಾವೇರಿ ಭಾಗದ ಮತದಾರರು ಪ್ರದೀಪ ಶೆಟ್ಟರ್ ಅವರ ಮುಖ ನೋಡುವುದು ಮುಂದಿನ ಚುನಾವಣೆಯಲ್ಲಿಯೇ.

2497 ಮತಗಳನ್ನು ಪಡೆದುಕೊಂಡು ಜಯ ಸಾಧಿಸಿರುವ ಪ್ರದೀಪ್ ಶೆಟ್ಟರ್ ಸೌಮ್ಯ ಸ್ವಭಾವದ ವ್ಯಕ್ತಿ ಸರಿ. ಆದರೆ ಮತ ಹಾಕಿದ ಚುನಾಯಿತ ಪ್ರತಿನಿಧಿಗಳಿಗೆ ಒಮ್ಮೆಯೂ ಕೂಡ ಭೇಟಿಯಾಗಿ ಅಹವಾಲು ಸ್ವೀಕರಿಸುವ ಕಾರ್ಯವನ್ನು ಮಾಡುತ್ತಿಲ್ಲ ಎಂಬುವಂತ ಮಾತು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ವಿಧಾನ ಪರಿಷತ್ ಸದಸ್ಯರಿಗೆ ನೀಡುವ ಅನುದಾನ ಸಾಲುವುದಿಲ್ಲ ಎಂದು ಧ್ವನಿ ಎತ್ತಿದ್ದ ಪ್ರದೀಪ ಶೆಟ್ಟರ್ ಕೇವಲ ತೋರಿಕೆಗೆ ಮಾತ್ರ ಹೀಗೆ ಹೇಳಿದ್ದಾರೆಯೇ..? ಅಥವಾ ಮುಂದಿನ ದಿನಗಳಲ್ಲಿ ಆದರೂ ಯಾವುದಾದರೂ ಮತದಾರರ ಸಮಸ್ಯೆ ಆಲಿಸುತ್ತಾರೆಯೇ ನೋಡಬೇಕಿದೆ. ಈ ವಿಷಯದಲ್ಲಿ ಹಾವೇರಿ ಹಾಗೂ ಗದಗ ಭಾಗದ ಮತದಾರರು ಅದೃಷ್ಟವಂತರಂತೂ ಅಲ್ಲವೇ ಅಲ್ಲ.

Edited By : Nagaraj Tulugeri
Kshetra Samachara

Kshetra Samachara

14/12/2021 03:07 pm

Cinque Terre

62.61 K

Cinque Terre

34

ಸಂಬಂಧಿತ ಸುದ್ದಿ